ಜೈಪುರ: ಇತ್ತೀಚಿನ ದಿನಗಳಲ್ಲಿ ಖದೀಮರು ಯಾವ ಯಾವ ರೀತಿಯಲ್ಲಿ ಹಲ್ಕಾ ಕೆಲಸ ಮಾಡುತ್ತಾರೆ ಎಂದು ನಂಬಲಿಕ್ಕೇ ಸಾಧ್ಯವಿಲ್ಲ. ಇತ್ತೀಚೆಗೆ ಜೈಪುರದ ಒಬ್ಬ ಖದೀಮ ಮಹಿಳೆಯ ಒಳುಡುಪು, ಕಳ್ಳತನ ನಡೆಸುವುದರಿಂದ ಜೈಪುರ್ ಮಹಿಳೆಯರ ನಿದ್ದೆಗೆಡಿಸಿದೆ.

ಅದ್ಯಾವುದೋ ಗೀಳು ಮನೋರೋಗದಿಂದ ಬಳಲುತ್ತಿರುವ ಈ ಕೃತ್ಯ ಎಸಗುತ್ತಿರಬಹುದೆಂದು ಶಂಕಿಸಲಾಗಿದೆ.
ಈತ ಮನೆಯಿಂದ ಹೊರಗೆ ನಿಂತು ಒಳಗಡೆ ಇಣುಕುತ್ತಾನೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯೊಳಗಡೆ ಹೊಕ್ಕುವ ಖದೀಮ ಮನೆಯನ್ನೆಲ್ಲಾ ಜಾಲಾಡಿ ಮಹಿಳೆಯರ ಒಳಉಡುಪನ್ನು ಕದ್ದೊಯ್ಯುತ್ತಾನಂತೆ.
ಈ ಬಗ್ಗೆ ವನಿತೆಯರು ಪೊಲೀಸರಿಗೆ ದೂರು ನೀಡಿದ್ದು, ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಪೊಲೀಸರು ಮಾತ್ರ ನಿಮ್ಮ ಸೊತ್ತುಗಳ ಬಗ್ಗೆ ಗಮನವಿಡಿ ಎಂದು ಎಚ್ಚರಿಕೆ ನೀಡಿದ್ದಾರೆ.
