modiಗುಜರಾತ್: ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಎರಡು ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧೆಗಿಳಿಯಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಗುಜರಾತ್ ನ ಅಹ್ಮದಾಬಾದ್ ಹಾಗೂ ಉತ್ತರ ಪ್ರದೇಶದ ವಾರಣಾಸಿಯಿಂದ ಮೋದಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ. ಗುಜರಾತ್ ನಲ್ಲಿ ಬಿಜೆಪಿ ಪ್ರಾಬಲ್ಯ ಮುಂದುವರಿದಿದೆ ಆದರೆ ಉತ್ತರ ಪ್ರದೇಶದಲ್ಲಿ ಪಕ್ಷದ ಸ್ಥಾನವನ್ನು ಭದ್ರಪಡಿಸುವ ಮುಂದಾಲೋಚನೆಯಿಂದ ಮೋದಿ ಈ ಕ್ರಮ ಕೈಗೊಂಡಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ. ಉತ್ತರ ಪ್ರದೇಶದ ವಾರಣಾಸಿಯಿಂದ ಆಪ್ ನಾಯಕ ಕೇಜ್ರಿವಾಲ್ ಸ್ಪರ್ಧಿಸಲು ಮುಂದಾಗಿದ್ದಾರೆ. ಆದರೆ ಮೋದಿ ಆಪ್ತ ಅಮಿತ್ ಶಾ ಧೈರ್ಯವಿದ್ದರೆ ಗುಜರಾತ್ ನಲ್ಲಿ ಮೋದಿ ವಿರುದ್ಧ ನಿಂತು ಗೆಲುವು ಸಾಧಿಸುವಂತೆ ಸವಾಲೆಸೆದಿದ್ದಾರೆ.

ಅಸಲಿಗೆ ಉತ್ತರ ಪ್ರದೇಶದಲ್ಲಿ ಮೋದಿ ವಿರುದ್ಧ ಕೇಜ್ರಿವಾಲ್ ಸ್ಪರ್ಧಿಸಿದರೆ ಕಠಿಣ ಸ್ಪರ್ಧೆ ಒಡ್ಡಬಹುದು ಎಂಬ ಕಾರಣದಿಂದ ಶಾ ಈ ಸವಾಲೆಸೆದು ಕೇಜ್ರಿವಾಲ್ ಗಮನವನ್ನು ಗುಜರಾತ್ ಕಡೆ ಸೆಳೆಯುವ ತಂತ್ರ ಹೆಣೆದಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆಯಾಗಿ ಮೋದಿ ಎಲ್ಲಾ ರೀತಿಯಲ್ಲೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಮೇಲುಗೈ ಸಾಧಿಸಲು ಬೇಕಾಗಿರುವ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *