ಮಂಗಳೂರು: ಉಚ್ಚಿಲದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಜಾತ್ರೆಯ ದಿನದಂದೇ ಚಿನ್ನಾಭರಣಗಳ ನಾಪತ್ತೆ ಬಗ್ಗೆ ವದಂತಿಗಳು ಹಬ್ಬಿಕೊಂಡಿದ್ದು, ರಥೋತ್ಸವದ ಸಂದರ್ಭ ದೇವರ ಮೂತರ್ಿಯಲ್ಲಿ ಯಾವುದೇ ಚಿನ್ನಾಭರಣ ಇರದಿರುವುದು ಸಾರ್ವಜನಿಕರಲ್ಲಿ ಅನುಮಾನ ಹುಟ್ಟುಹಾಕಿದೆ. ದೇವರ ಬಲಿ ಮೂತರ್ಿಗೆ ನಕಲಿ ಕವಚ ಅಳವಡಿಸಿರುವುದನ್ನು ಸಾರ್ವಜನಿಕರು ಗಮನಿಸಿ ಈ ಬಗ್ಗೆ ವಿಚಾರಿಸಿದಾಗ ದೇವಳದಲ್ಲಿ ಸುಮಾರು 50 ಲಕ್ಷಕ್ಕೂ ಮಿಕ್ಕಿ ಚಿನ್ನಾಭರಣ ನಾಪತ್ತೆ ಆದ ಘಟನೆ ಬೆಳಕಿಗೆ ಬಂದಿದೆ.

ucchila temple
ಈ ಬಗ್ಗೆ ದೇವಳದ ಆಡಳಿತ ವರ್ಗದ ಸ್ಪಷ್ಟ ಉತ್ತರ ನೀಡದಿರುವ ಹಿನ್ನಲೆಯಲ್ಲಿ ಉಚ್ಚಿಲದ ನಾಗರಿಕರು ದೇವಳದ ಆಡಳಿತ ಮೊಕ್ತೇಸರ ಹಾಗೂ ಅರ್ಚಕರಾದ ವಿರುದ್ಧ ಅವ್ಯವಹಾರ ನಡೆಸಿದ್ದಾರೆಂದು ಆರೋಪಿಸಿ ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿದ್ದಾರೆ.
ಪೊಲೀಸರು ದೇವಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ದೇವಳದ ಲಾಕರ್ನಲ್ಲಿದ್ದ ಸಂಪೂರ್ಣ ಚಿನ್ನಾಭರಣ ನಾಪತ್ತೆ ಆಗಿರುವುದು ಕಂಡು ಬಂದಿದೆ. ಲಾಕರ್ ರೂಮಲ್ಲಿ ಬೆಳ್ಳಿಯ ಪಲ್ಲಕ್ಕಿ ಸಹಿತ ಲಕ್ಷಾಂತರ ಮೌಲ್ಯದ ಬೆಳ್ಳಿಯ ಪೂಜಾ ವಸ್ತುಗಳು ಮಾತ್ರ ಕಂಡು ಬಂದಿತ್ತು. ಭಕ್ತರು ನೀಡಿದ್ದ 11 ಬೆಳ್ಳಿಯ ತಂಬಿಗೆ ಹಾಗೂ ಬೆಳ್ಳಿಯ ಹರಿವಾಣಗಳನ್ನು ದೇವಳದ ಪುಸ್ತಕದಲ್ಲಿ ದಾಖಲಾಗಿಲ್ಲ. ಈ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಅವ್ಯವಹಾರಗಳು ನಡೆಯುತ್ತಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಭ್ರಷ್ಟರನ್ನು ಪತ್ತೆಹಚ್ಚಬೇಕೆಂದು ಸಾರ್ವಜನಿಕರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

By suddi9

Leave a Reply

Your email address will not be published. Required fields are marked *