2015ರ ವಿಶೇಷ ಆಕರ್ಷಣೆ ಫತೇಅರ್ಮಿ ಬ್ಯಾಂಡ್
ಸುದ್ದಿ9 ಮೂಡುಬಿದರೆ: ಆಳ್ವಾಸ್ ವಿರಾಸತ್‍ನಲ್ಲಿ ವಿನೂತನ ಪ್ರಯತ್ನ, ಪ್ರದರ್ಶನಗಳಿಗೆ ಹೆಸರುವಾಸಿ. ವಿಭಿನ್ನ ಕಾರ್ಯಕ್ರಮವನ್ನು ಕರಾವಳಿಯಲ್ಲಿ ಪ್ರದರ್ಶಿಸಲು ವೇದಿಕೆ ಕಲ್ಪಿಸುವ ಆಳ್ವಾಸ್ ಸಂಸ್ಥೆ ಈ ಬಾರಿ ವಿರಾಸತ್‍ನ ನಾಲ್ಕೂ ದಿನ ಪಂಜಾಬಿನ ಫತೇಅರ್ಮಿ ಬ್ಯಾಂಡ್ ವಾದನ ಜನಮನ ಸೊರೆಗೊಂಡಿತು.
ಆಳ್ವಾಸ್ ವಿರಾಸತ್‍ನ ಮೊದಲನ ದಿನ ಮೆರವಣಿಗೆಯಲ್ಲಿ ಸಾಗಿಬಂದ ಪಂಜಾಬಿನ ಫತೇ ಫೌಜಿ ಪೈಪ್ ಬ್ಯಾಂಡ್ ತಂಡ, ವಿರಾಸತ್ ಪ್ರತಿದಿನ ಕಾರ್ಯಕ್ರಮಗಳು ಪ್ರಾರಂಭವಾಗುವ ಮುಂಚೆಯೇ ಮುಖ್ಯಧ್ವಾರದಲ್ಲಿ ನಿಂತು ಪ್ರದರ್ಶನ ನೀಡಿದರು. ಪ್ರತಿದಿನವೂ ವಿಭಿನ್ನ ದಿರಿಸುಗಳೊಂದಿಗೆ ಗಮನಸೆಳೆದ ತಂಡವು, ಬ್ಯಾಂಡ್ ವಾದನದ ಜೊತೆಗೆ ಹಿತವಾಗುವ ರೀತಿಯಲ್ಲಿ ಹೆಜ್ಜೆ ಹಾಕುವುದರಿಂದ ಮತ್ತಷ್ಟು ಆಕರ್ಷಕವಾಗಿ ಕಂಡುಬಂದಿತು. ತಂಡದ 9 ಜನ ಸದಸ್ಯರು ನಾಜೂಕಾಗಿ ಪ್ರದರ್ಶನ ನೀಡಿದ್ದರು.
ತಂಡದ ಮುಖ್ಯಸ್ಥ ಬಲ್ಬೀರ್ ಸಿಂಗ್, 4 ದಿನಗಳು ವಿರಾಸತ್ ತಮ್ಮ ಅನುಭವವನ್ನು ಹಂಚಿಕೊಂಡರು. ಈ ಹಿಂದೆ ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆಯವರ ಮಗಳ ಮದುವೆಯಲ್ಲಿ ಪ್ರದರ್ಶನ ನೀಡಿದ್ದೆವು. ಆಳ್ವಾಸ್ ವಿರಾಸತ್‍ನಲ್ಲಿ ಇದೇ ಮೊದಲಬಾರಿಗೆ ಕಾಣಿಸಿಕೊಂಡಿದ್ದೇವೆ. ವಿರಾಸತ್ ಗೊಂದಲರಹಿತವಾದ ಅತ್ಯುತ್ತಮ ವ್ಯವಸ್ಥೆ. ಬಡವ ಶ್ರೀಮಂತ ಎನ್ನದೆ ಎಲ್ಲರೂ ಮುಕ್ತವಾಗಿ ಒಂದೇ ಕಡೆ ರಾಷ್ಟ್ರೀಯ ಸಾಂಸ್ಕ್ರತಿಕ ವೈಭವವನ್ನು ಕಣ್ಮನಕ್ಕೆ ಇಳಿಸುವ ಅಪರೂಪದ ಕ್ಷಣ ಬೇರೆಲ್ಲೂ ಕಾಣಲು ಸಿಕ್ಕಿಲ್ಲ. ಎಲ್ಲರೊಂದಿಗೆ ಬೆರೆಯುವ, ಎಲ್ಲೂ ಅಹಂಕಾರ ತೋರಿಸದ ಡಾ.ಎಂ.ಮೋಹನ್ ಆಳ್ವ ವ್ಯಕ್ತಿತ್ವ ಇಷ್ಟವಾಯಿತು. ಅವಕಾಶ ಸಿಕ್ಕಿದರೆ ಮತ್ತೆ ಆಳ್ವಾಸ್ ವಿರಾಸತ್‍ನಲ್ಲಿ ಪ್ರದರ್ಶನ ನೀಡುತ್ತೇವೆ ಎಂದು ಸಂತೋಷ ವ್ಯಕ್ತಪಡಿಸಿದರು.


