ಬಂಟ್ವಾಳ: ಇಲ್ಲಿನ ರಾಮಲ್ಕಟ್ಟೆಯಕಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ 2ಎಂ.ಜಿ. ರೇಚಕ ಸ್ಥಾವರದಿಂದ ನೀರು ಶುದ್ದೀಕರಣ ಮಾಡಿ ತುಂಬೆ ಗ್ರಾಮಪಂಚಾಯತ್ ವ್ಯಾಪ್ತಿಯ ಜನರಿಗೆ ಒದಗಿಸುವಂತೆ ಇಲ್ಲಿನ ಗ್ರಾಮಸ್ಥರು ಜಿಲ್ಲಾಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಅವರಿಗೆ ಮನವಿ ಮಾಡಿದ್ದಾರೆ.
ಶುಕ್ರವಾರ ಬೆಳಿಗ್ಗೆ ರಾಮಲ್ಕಟ್ಟೆಗೆ ಭೇಟಿ ನೀಡಿದ್ದ ಸತೀಶ್ ಕುಂಪಲಅವರಿಗೆ ತುಂಬೆ ಗ್ರಾಮಸ್ಥರ ಪರವಾಗಿ ಪಂಚಾಯತ್ ಅಧ್ಯಕ್ಷ ಮಹಮ್ಮದ್ ವಳವೂರು ಬೇಸಿಗೆಯಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸತೀಶ್ ಕುಂಪಲ ರೇಚಕ ಸ್ಥಾವರ ಇನ್ನೂ ಮಹಾನಗರ ಪಾಲಿಕೆಯ ವಶದಲ್ಲಿದ್ದು ಜಿಲ್ಲಾಪಂಚಾಯತ್ಗೆ ಹಸ್ತಾಂತರಗೊಂಡಿಲ್ಲ. ಇದು ಸಮಗ್ರ ಕಾರ್ಯನಿರ್ವಹಣೆಯಾಗಿ ಹಸ್ತಾಂತರಗೊಳ್ಳ ಬೇಕಾದರೆ 23 ಕೋಟಿ ರುಪಾಯಿ ಅನುದಾನ ಬೇಕು. ಸದ್ಯದ ಪರಿಸ್ಥಿತಿಯಲ್ಲಿ ಇಷ್ಟೊಂದು ಮೊತ್ತವನ್ನು ಭರಿಸುವುದು ಜಿ.ಪಂ.ಗೆ ಸಾಧ್ಯವಿಲ್ಲ. ಸಕರ್ಾರ ಈ ಅನುದಾನವನ್ನು ನೀಡಿದಲ್ಲಿ ಮಾತ್ರ ಜಿ.ಪಂ ಹಸ್ತಾಂತರ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟ ಪಡಿಸಿದರು.
ರಾಮಲ್ಕಟ್ಟೆಯ 2 ಎಂ.ಜಿ. ರೇಚಕ ಸ್ಥಾವರವನ್ನು ಮಹಾನಗರ ಪಾಲಿಕೆಯಿಂದ ಜಿ.ಪಂ.ಗೆ ಹಸ್ತಾಂತರ ಮಾಡುವ ಬಗ್ಗೆ ಈಗಾಗಲೇ ಜಿ.ಪಂ.ನಲ್ಲಿ ಚರ್ಚೆ ನಡೆಸಲಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರಾಭಿವೃದ್ದಿ ಸಚಿವರ ಗಮನಕ್ಕೂ ತರಲಾಗಿದೆ. ಈ ಬಗ್ಗೆ ಇಂದು (ಶುಕ್ರವಾರ) ನೀರಾವರಿ ಸಚಿವ ಎಸ್.ಕೆ.ಪಾಟಿಲ್ ಜೊತೆ ರಾಜ್ಯ ಮಟ್ಟದ ಸಭೆ ನಡೆಯಲಿದ್ದು ಈ ವಿಚಾರವೂ ಚರ್ಚೆಗೆ ಬರಲಿದೆ ಎಂದು ತಿಳಿಸಿದರು.
ಜಿ.ಪಂ.ಗೆ ಪೂರ್ಣ ಪ್ರಮಾಣದಲ್ಲಿ ಹಸ್ತಾಂತರ ಪಡೆದುಕೊಳ್ಳದೆ ಜನರಿಗೆ ನೀರು ಕೊಡಲು ಸಾಧ್ಯವಾಗದ ಅತಂತ್ರ ಸ್ಥಿತಿ ನಿರ್ಮಾಣಗೊಳ್ಳ ಬಹುದು. ಸದ್ಯಕ್ಕೆ ಇದು ಮಹಾನಗರ ಪಾಲಿಕೆಯ ಜವಬ್ದಾರಿ ಎಂದು ವಿವರಿಸಿದರು. ಇದೇ ವೇಳೆ ರಾಮಲ್ಕಟ್ಟೆ ಬರೆ ಎಂಬಲ್ಲಿಗೆ ಇರುವ ಕಾಲುದಾರಿಯನ್ನು ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಗ್ರಾಮಸ್ಥರು ಈ ಸಂದರ್ಭ ಮನವಿ ಮಾಡಿಕೊಂಡರು. ರೇಚಕ ಸ್ಥಾವರದ ಆವರಣಗೋಡೆಯಿಂದಾಗಿ ರಸ್ತೆ ಅಭಿವೃದ್ದಿ ಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು. ಪಂಚಾಯತ್ ಸದಸ್ಯ ಪ್ರಕಾಶ್ ಆಚಾರ್ಯ, ಗಣೇಶ್ ಸುವರ್ಣ, ಪ್ರವಿಣ್ ಬಿ. ಮೋನಪ್ಪ ಪೂಜಾರಿ, ಅರುಣ್ ಕುಮಾರ್, ರಾಜೀವ, ಮನೋಹರ ಕೊಟ್ಟಾರಿ, ವಿಜಯ, ಪ್ರಶಾಂತ ಕೊಟ್ಟಾರಿ, ಯೋಗೀಶ ಹಾಜರಿದ್ದರು.

