ಸುದ್ದಿ9ಬಂಟ್ವಾಳ : ಸಮಾಜದ ಒಳ್ಳೆಯದಕ್ಕೆ ಈ ಯಕ್ಷಗಾನ ಪೂರಕವಾಗಲಿ ಎಂದು ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತಿ ಮಹಾಸ್ವಾಮಿಗಳು ಆಶೀರ್ವಚನವಿತ್ತರು . ಅವರು ಗೋಪಾಲಕೃಷ್ಣ ವಿಶ್ವಸ್ಥ ಮಂಡಳಿ ಕನಕಗಿರಿ ಮಂಚಿ ಇದರ ವತಿಯಿಂದ ಜರಗುವ ಧಾಮರ್ಿಕ ಮಹೋತ್ಸವ , ಯಕ್ಷೊತ್ಸವದ ಉದ್ಘಾಟನಾ ಸಮಾರಂಭದ ದೀಪೋಜ್ವಲನಗೈದರು .
ಸಮಾಜದಲ್ಲಿ ಇಂದಿನ ದಿನಗಳಲ್ಲಿ ಕುಸಿಯುತ್ತಿರುವ ನೈತಿಕ ಮೌಲ್ಯಗಳ ವರ್ಧನೆಗೆ ಯಕ್ಷಗಾನ ಪೂರಕ ವಾತಾವರಣ ನಿಮರ್ಿಸುತ್ತಿದೆ ಎಂದು ಕನರ್ಾಟಕ ಬ್ಯಾಂಕಿನ ಅಧ್ಯಕ್ಷ ಅನಂತಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪ , ಬಂಟ್ವಾಳ ತಾಲೂಕು ಅಖಿಲ ಕನರ್ಾಟಕ ಬ್ರಾಹ್ಮಣ ಪರಿಷತ್ ಅಧ್ಯಕ್ಷ ನ್ಯಾಯವಾದಿ ಕೆ.ರಮೇಶ್ ಉಪಾಧ್ಯಾಯ , ಚಿ.ಎಚ್ ಸೀತಾರಾಮ ಶೆಟ್ಟಿ , ಲಕ್ಷ್ಮಣ ಮಂಚಿ , ಭವಾನಿಶಂಕರ್ , ಕೈಯೂರು ರಮೇಶ್ ಉಪಸ್ಥಿತರಿದ್ದರು . ಸಂಚಾಲಕ ಕೈಯೂರು ನಾರಾಯಣ ಭಟ್ ಸ್ವಾಗತಿಸಿದರು . ತಿರುಮಲೇಶ್ ಕೈಯೂರು ವಂದಿಸಿ ಕಾರ್ಯಕ್ರಮ ನಿರ್ವಹಿಸಿದರು . ನಂತರ ” ವೇದೋದ್ಧರಣ ” ಯಕ್ಷಗಾನ ಪ್ರದರ್ಶನಗೊಂಡಿತು.


