ಶಿಕ್ಷಣದೊಂದಿಗೆ ಸಂಸ್ಕಾರ ಅಗತ್ಯ: ಡಾ.ಮೋಹನ್ ಆಳ್ವ
ಸುದ್ದಿ9ಮೂಡುಬಿದರೆ: ಮೌಲ್ಯಯುತ ಶಿಕ್ಷಣದೊಂದಿಗೆ ಸಂಸ್ಕಾರವನ್ನು ಬೆಳೆಸುವ ಕೆಲಸ ಶಿಕ್ಷಣ ಸಂಸ್ಥೆಗಳಿಂದ, ಪೋಷಕರಿಂದ ನಡೆಯಬೇಕು. ಮಕ್ಕಳಿಗೆ ಸಂಸ್ಕಾರ ನೀಡಿದರೆ ಅವರು ಸಮಾಜಘಾತಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಪ್ಪಿಸಬಹುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ತಿಳಿಸಿದರು.
ವಿವೇಕಾನಂದ ನಗರದಲ್ಲಿ ಶನಿವಾರ ಸಂಜೆ ನಡೆದ ಆಳ್ವಾಸ್ ಕನ್ನಡ ಹಾಗೂ ಆಂಗ್ಲಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಾಷರ್ಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದ್ಯಮಿ ಶ್ರೀಪತಿ ಭಟ್ ಮುಖ್ಯ ಅತಿಥಿಯಾಗಿ ಮಾತಾನಾಡಿ, ವಿದ್ಯಾಥರ್ಿಗೆ ವಿದ್ಯೆಯ ಜೊತೆಗೆ ವಿನಯವಂತಿಕೆ ಮುಖ್ಯ. ಶಿಸ್ತುಬದ್ಧ ಜೀವನಕ್ರಮ,ಅಧ್ಯಯನಶೀಲತೆಯಿದ್ದರೆ ಮಾತ್ರ ಗುರಿ ತಲುಪಬಹುದು ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ನಿವೃತ್ತ ಶಿಕ್ಷಕ ಅಂಡಾರು ಗುಣಪಾಲ ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು.
ಶೈಕ್ಷಣಿಕ ಸಾಧನೆ, ಸಾಂಸ್ಕೃತಿಕ ಸ್ಪಧರ್ೆಗಳಲ್ಲಿ ವಿಜೇತರಾದ ವಿದ್ಯಾಥರ್ಿಗಳನ್ನು ಪುರಸ್ಕರಿಸಲಾಯಿತು.
ಗೀತಾಲಕ್ಷ್ಮಿ ಸ್ವಾಗತಿಸಿದರು. ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ್ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ವಸಂತ ಕುಮಾರ್ ನಿಟ್ಟೆ ವರದಿ ವಾಚಿಸಿದರು.
ಮೊನಿಷಾ ಹಾಗೂ ಜಯಪ್ರಕಾಶ ಕಾರ್ಯಕ್ರಮ ನಿರೂಪಿಸಿದರು. ಸುರಭಿ ವಂದಿಸಿದರು.

005p

By Suddi9

Leave a Reply

Your email address will not be published. Required fields are marked *