ಸುದ್ದಿ9ಕಡಂದಲೆ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಹಾಗು ಕಡಂದಲೆ ಹಾಲು ಉತ್ಫಾದಕರ ಸಂಘಗಳ ಆಶ್ರಯದಲ್ಲಿ ಜಾನುವಾರಗಳ ಸಾಮೂಹಿಕ ಜಂತುಹುಳ ನಿವಾರಣಾ ಕಾರ್ಯಕ್ರಮದ ಉಧ್ಘಾಟನೆಯು ಕಡಂದಲೆ ಹಾಲು ಉತ್ಫಾದಕರ ಸಂಘದ ಸಭಾಂಗಣದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿದರ್ೇಶಕ ಹಾಗು ಕಡಂದಲೆ ಹಾಲು ಉತ್ಪಾಧಕರ ಸಹಕಾರಿ ಸಂಘದ ಅಧ್ಯಕ್ಷ ಸುಚರಿತ ಶೆಟ್ಟಿ ಮಾತ್ರೆ ನೀಡುವ ಮೂಲಕ ಉಧ್ಘಾಟಿಸಿ ಮಾತನಾಡಿದ ಅವರು ಹಾಲು ಉತ್ಪಾದಕದ ಒಕ್ಕೂಟ ಹೈನುಗಾರರ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ರೈತರಿಗೆ ಇನ್ನು ಹೆಚ್ಚಿನ ಪ್ರೋತ್ಸಾಹ ಧನ ನೀಡುವ ಬಗ್ಗೆ ಈಗಾಗಲೇ ಮಾತುಕತೆ ನಡೆದಿದ್ದು ಹೈನುಗಾರರಿಗೆ ಹೆಚ್ಚಿನ ಲಾಭ ಸಿಗಲಿದೆ ಎಂದರು.
ದ.ಕ.ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ಚಂದ್ರಶೇಖರ ಭಟ್ಟ್ ರಾಸುಗಳ ರೋಗ ಹಾಗು ಪರಿಹಾರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು ದ.ಕ.ಸಹಕಾರಿ ಹಾಲು ಒಕ್ಕೂಟದ ವಿಸ್ತರಾಣಾಧಿಕಾರಿ ಯಮುನ ,ಕಡಂದಲೆ ಹಾಲು ಉತ್ಪಾದಕರ ಸಹಕಾರಿ ಸಂಘದ ನಿದರ್ೇಶಕ ಪಾಂಡುರಂಗ ಶೆಟ್ಟಿ, ಜಯಂತ ಗೌಡ, ನಾರಾಯಣ ಭಟ್ಟ್ ,ವಿಲಿಯಂ ಡಾಯಸ್ ಅಮೀತಾ ಶೆಟ್ಟಿ, ಸಂಘದ ಕಾರ್ಯದಶರ್ಿ ಶಿವರಾಮ ಸೇರಿಗಾರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .

