ಏ.7ರಿಂದ ಮೇ 12ರವರೆಗೆ ಮತದಾನ; ಮೇ 16ಕ್ಕೆ ಮತ ಎಣಿಕೆ
ನವದೆಹಲಿ: ಏಪ್ರಿಲ್ 7 ರಿಂದ ಮೇ 12ರವರೆಗೆ 9 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಅಧಿಕೃತ ಪ್ರಕಟಣೆ ಹೊರಡಿಸಿದೆ.
ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಮುಖ್ಯ ಚುನಾವಣಾ ಆಯುಕ್ತ ವಿ ಎಸ್ ಸಂಪತ್ ಅವರು ಚುನಾವಣೆಯ ಸಂಪೂರ್ಣ ಚಿತ್ರಣ ಒದಗಿಸಿದ್ದಾರೆ. ಅಲ್ಲದೆ ಕನರ್ಾಟಕದಲ್ಲಿ ಏಪ್ರಿಲ್ 17ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
ಮತದಾನದ ವಿವಿಧ ಹಂತಗಳು:
ಏಪ್ರಿಲ್7: 2 ರಾಜ್ಯಗಳಲ್ಲಿ 6 ಕ್ಷೇತ್ರಗಳು
ಏಪ್ರಿಲ್9: 5 ರಾಜ್ಯಗಳಲ್ಲಿ 7 ಕ್ಷೇತ್ರಗಳು
ಏಪ್ರಿಲ್10: 14 ರಾಜ್ಯಗಳಲ್ಲಿ 92 ಕ್ಷೇತ್ರಗಳು
ಏಪ್ರಿಲ್12: ಮೂರು ರಾಜ್ಯಗಳಲ್ಲಿ 5 ಕ್ಷೇತ್ರಗಳು
ಏಪ್ರಿಲ್17: 13 ರಾಜ್ಯಗಳಲ್ಲಿ 122 ಕ್ಷೇತ್ರಗಳು
ಏಪ್ರಿಲ್24: 12 ರಾಜ್ಯಗಳಲ್ಲಿ 170 ಕ್ಷೇತ್ರಗಳು
ಮೇ 16ರಂದು ಮತ ಎಣಿಕೆ:ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಮೇ 16ರ ಒಂದೇ ದಿನ ಮತ ಎಣಿಕೆ ನಡೆಯಲಿದ್ದು ಅಂದೇ ಮುಂದಿನ ಸ್ಪಷ್ಟ ಚಿತ್ರಣ ದೊರೆಯಲಿದೆ.ಅಭ್ಯಥರ್ಿಯನ್ನು ತಿರಸ್ಕರಿಸುವ ಆಯ್ಕೆ:(ನೋಟಾ)ಈ ಮುಂಚೆ ಪಂಚರಾಜ್ಯ ವಿಧಾನ ಸಭಾ ಚುನಾವಣೆಗಳಲ್ಲಿ ಬಳಕೆಯಾಗಿದ್ದ ಅಭ್ಯಥರ್ಿಗಳನ್ನು ತಿರಸ್ಕರಿಸುವ ನೋಟಾ ಆಯ್ಕೆಯನ್ನು ಮತದಾರರಿಗೆ ಕಲ್ಪಿಸಲಾಗಿದೆ.
