ದೆಹಲಿ: ಮುಂದಿನ ಲೋಕಸಭಾ ಚುನಾವಣೆಯು ಎಪ್ರಿಲ್ 16ರಿಂದ ಮೇ 13ರವರೆಗೆ ನಡೆಯಲಿರುವುದಾಗಿ ಚುನಾವಣಾ ಆಯೋಗ ಘೋಷಿಸಿದೆ. ಎಪ್ರಿಲ್ 16ರಂದು 124 ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದರೆ, ಎಪ್ರಿಲ್ 22ಕ್ಕೆ 141, ಎಪ್ರಿಲ್ 30ಕ್ಕೆ 107, ಮೇ7ಕ್ಕೆ 85 ಮತ್ತು ಮೇ 13ಕ್ಕೆ 86 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಇದೇ ಮೊದಲ ಬಾರಿ ಆರು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಸಲು ಉದ್ದೇಶಿಸಲಾಗಿದೆ. ಮೇ 16ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಯಾಯಾ ರಾಜ್ಯಗಳಲ್ಲಿ ಚುನಾವಣೆ ನಡೆಯುವ ದಿನಾಂಕವನ್ನು ಬುಧವಾರದಂದು ಪ್ರಕಟಿಸುವುದಾಗಿ ಆಯೋಗ ತಿಳಿಸಿದೆ.

