ಮೂಡುಬಿದಿರೆ : ಕಳೆದ ಒಂದೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದ ಮಹಿಳೆಯೊಬ್ಬರು ತಾಯಿ ಮನೆಗೆ ಹೋಗಿ ಬರುವೆಂದು ಹೇಳಿ ಹೋಗಿ ತಾಯಿ ಮನೆಗೆ ಹೋಗದೆ ಇತ್ತ ಗಂಡನ ಮನೆಗೂ ಬಾರದೆ ನಾಪತ್ತೆಯಾದ ಘಟನೆ ಕಡಂದಲೆಯಲ್ಲಿ ಗುರುವಾರ ನಡೆದಿದೆ.
ಕಡಂದಲೆಯ ಹರೀಶ್ ಪೂಜಾರಿ ಎಂಬವರ ಪತ್ನಿ ಆನಂದಿ (23ವ) ನಾಪತ್ತೆಯಾದ ಮಹಿಳೆ. ಈಕೆ ಪಾಲಡ್ಕದಲ್ಲಿರುವ ತನ್ನ ತಾಯಿ ಮನೆಗೆ ಹೋಗಿ ಬರುವುದಾಗಿ ಗಂಡನಲ್ಲಿ ತಿಳಿಸಿ ಹೋಗಿದ್ದರು. ಆದರೆ ಹೆಂಡತಿ ಮನೆಗೆ ಹಿಂತಿರುಗಿ ಬಾರದೆ ಇದ್ದುದರಿಂದ ಕಳವಳಗೊಂಡ ಪತಿ ಮಾವನ ಮನೆ ಮತ್ತು ಸಂಬಂಧಿಕರಲ್ಲಿ ವಿಚಾರಿಸಿದಾಗ ಅಲ್ಲಿ ಹೋಗದೆ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಪತಿ ಹರೀಶ್ ಪೂಜಾರಿ ಅವರು ಮೂಡುಬಿದಿರೆ ಪೊಲೀಸರಿಗೆ ಶನಿವಾರ ದೂರು ನೀಡಿದ್ದು ಪೊಲೀಸರು ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
