ಮೂಡುಬಿದಿರೆ: ಚರ್ಚ್ಗೆ ಹೊಸವರ್ಷದ ವಿಶೇಷ ಪ್ರಾರ್ಥನೆಗೆ ಹೋಗುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯಿಂದ ಸರಗಳ್ಳರು ಸುಮಾರು 1.5 ಲಕ್ಷ ಮೌಲ್ಯದ ಸರಗಳನ್ನು ಬುಧವಾರ ಸಂಜೆ ಕಲ್ಲಬೆಟ್ಟು ಎಂಬಲ್ಲಿ ಎಗರಿಸಿದ್ದಾರೆ.
ಕಲ್ಲಬೆಟ್ಟು ನಿವಾಸಿ ಫೆಲಿಕ್ಸ್ ಡಿ’ಸೋಜಾ ಎಂಬವರ ಪತ್ನಿ ಹೆಲನ್ ಡಿ’ಸೋಜಾ(50) ಎಂಬವರು ಬುಧವಾರ ಸಂಜೆ 6.45ರ ವೇಳೆಗೆ ಸ್ಥಳೀಯ ಮಹಿಳೆಯೊಬ್ಬರ ಜೊತೆ ಗಂಟಾಲ್ಕಟ್ಟೆ ಚರ್ಚ್ ಗೆ ಹೊಸವರ್ಷದ ವಿಶೇಷ ಪ್ರಾರ್ಥನೆಗೆ ಹೋಗುತ್ತಿದ್ದರು.
ಈ ಸಂದರ್ಭ ಮಾರುರು ಕಡೆಯಿಂದ ಬೈಕ್ನಲ್ಲಿ ಬಂದಿದ್ದ ಅಪರಿಚಿತರಿಬ್ಬರು, ಮಹಿಳೆಯ ಕುತ್ತಿಗೆಯಿಂದ 40 ಗ್ರಾಂ ಚಿನ್ನದ ಮಾಂಗಲಸೂತ್ರ ಹಾಗೂ 4 ಪವನ್ನ ಚಿನ್ನದ ಸರ ಎಗರಿಸಿದ್ದಾರೆ. ಕಳ್ಳತನವಾದ ಚಿನ್ನದ ಒಡವೆಗಳ ಮೌಲ್ಯ ಸುಮಾರು 1.50 ಲಕ್ಷವಾಗಿದೆ.
ಈ ಬಗ್ಗೆ ಒಡವೆಗಳನ್ನು ಕಳೆದುಕೊಂಡ ಮಹಿಳೆ ಮೂಡುಬಿದರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *