ನವದೆಹಲಿ: ಅಬಕಾರಿ ಸುಂಕ ವಿನಾಯಿತಿ ಹಿಂಪಡೆದ ಕಾರಣಕ್ಕೆ ಕಾರು, ಬೈಕುಗಳು ದುಬಾರಿಯಾಗಲಿದ್ದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಮತ್ತೆ ಇಳಿಕೆ ಕಂಡಿರುವುದರಿಂದ ಇಂದು ಮಧ್ಯ ರಾತ್ರಿಯಿಂದ ಪೆಟ್ರೋಲ್ ಹಾಗೂ ಡಿಸೇಲ್ ದರದಲ್ಲಿ ಮತ್ತೆ ಇಳಿಕೆಯಾಗಲಿದೆ ಎಂದು ತಿಳಿದುಬಂದಿದೆ.

petrol

ಕೇಂದ್ರ ಸರ್ಕಾರ ಹೊಸ ವರ್ಷಕ್ಕೆ ಒಂದೆಡೆ ವಾಹನಗಳ ದರದಲ್ಲಿ ಏರಿಕೆಯಾಗುವಂತೆ ಮಾಡಿದ್ದರೆ ಮತ್ತೊಂದೆಡೆ ಪೆಟ್ರೋಲ್ ಹಾಗೂ ಡಿಸೇಲ್ ದರ ಇಳಿಕೆಯಾಗುತ್ತಿರುವುದು ಗ್ರಾಹಕರಲ್ಲಿ ಒಂದಷ್ಟು ಸಮಾಧಾನ ತರಿಸಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಸತತ ಇಳಿಕೆ ಕಾಣುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಇದರ ಲಾಭ ಭಾರತೀಯ ಗ್ರಾಹಕರಿಗೆ ಸಿಗುತ್ತಿಲ್ಲ.

ರೂಪಾಯಿ ಎದುರು ಡಾಲರ್ ಮೌಲ್ಯ ಏರಿಕೆಯಾಗಿರುವುದೇ ಇದಕ್ಕೆ ಕಾರಣವೆನ್ನಲಾಗಿದ್ದು, ರೂಪಾಯಿ ಮೌಲ್ಯ ಚೇತರಿಸಿಕೊಂಡರೆ ದರ ಇನ್ನಷ್ಟು ಕಡಿಮೆಯಾಗಲಿದೆ. ಪೆಟ್ರೋಲ್ ಹಾಗೂ ಡಿಸೇಲ್ ದರವನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ನಿರ್ಧರಿಸುತ್ತಿರುವುದರಿಂದ ಪೆಟ್ರೋಲ್ ಬೆಲೆ ಒಂಭತ್ತು ಬಾರಿ ಹಾಗೂ ಡಿಸೇಲ್ ದರ 5 ಬಾರಿ ಕಡಿಮೆಯಾದಂತಾಗಿದೆ.

 

By suddi9

Leave a Reply

Your email address will not be published. Required fields are marked *