ಸುದ್ದಿ9 ಮೂಡುಬಿದರೆ: ಚೆನೈನ ಕ್ರೆಸೆಂಟ್ ವಿ.ವಿ. ಆಶ್ರಯದಲ್ಲಿ ಮಂಗಳವಾರ ಮುಕ್ತಾಯಗೊಂಡ ಅಖಿಲ ಭಾರತ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಮಂಗಳೂರು ವಿ.ವಿ ಪ್ರಥಮ ಸ್ಥಾನ ಪಡೆದಿದೆ.
ಕ್ವಾಟರ್ ಪೈನಲ್ನಲ್ಲಿ ಕೇರಳದ ಕ್ಯಾಲಿಕಟ್ ವಿವಿಯನ್ನು ಸೋಲಿಸಿ 11 ನೇ ಬಾರಿ ಲೀಗ್ ಅಂತಕ್ಕೆ ಅರ್ಹತೆಯನ್ನು ಪಡೆದ ಮಂ.ವಿ.ವಿ ಲೀಗ್ ಅಂತದಲ್ಲಿ ಚೆನೈನ ಅಣ್ಣ ವಿವಿಯನ್ನು 29-19, 29-19 ಅಥಿತೇಯ ಕ್ರೆಸೆಂಟ್ ವಿ.ವಿಯನ್ನು 29-12 ಹಾಗೂ 29-18 ಹಾಗೂ ನಿರ್ಣಾಯಕ ಪೈನಲ್ನಲ್ಲಿ ಚೆನ್ನೈನ ಎಸ್.ಆರ್.ಎಮ್. ವಿವಿಯನ್ನು 29-10 , 29-15 ನೇರ ಸೆಟ್ಗಳಿಂದ ಸೋಲಿಸಿ 2014-15 ನೇ ಸಾಲಿನ ಅಂತರ್ ವಿ.ವಿ ಚಾಂಪಿಯನ್ ಶಿಪ್ ಪಡೆಯಿತು.
ಈ ಟೂರ್ನಿಯಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ಶೃತಿ ಎ. ಆರ್ ರವರಿಗೆ ಸವರ್ಾಂಗೀಣ ಕೂಟದ ಪ್ರಶಸ್ತಿ ಲಭಿಸಿದೆ. ಮಂಗಳೂರು ವಿಶ್ವ ವಿದ್ಯಾಲಯ ತಂಡದಲ್ಲಿ ಎಂಟು ಮಂದಿ ಆಳ್ವಾಸ್ನ ಹಾಗೂ ಎರಡು ಮಂದಿ ಮಂಗಳೂರು ವಿವಿ ಕ್ಯಾಂಪಸ್ ತಂಡದಲ್ಲಿದ್ದರು.
mbd_dec30_5

By suddi9

Leave a Reply

Your email address will not be published. Required fields are marked *