ಮೂಡುಬಿದರೆ: ಗೋವಾದಲ್ಲಿ ಡಿ.18ರಂದು ನಡೆದ ಭೀಕರ ಅಪಘಾತದಲ್ಲಿ ಮೂಡುಬಿದರೆ ಕಲ್ಲಬೆಟ್ಟುವಿನ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡು, ಭಾನುವಾರ ರಾತ್ರಿ ಕೊನೆಯುಸಿರೆಳೆದರು.
ಕಲ್ಲಬೆಟ್ಟುವಿನ ಯುವಕ ಮಧುಸೂದನ ನಾಯಕ್ (25) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮಧುಸೂದನ ನಾಯಕ್

ಈತ ಕಲ್ಲಬೆಟ್ಟು ನಿವಾಸಿ ಸವರ್ೋತ್ತಮ ನಾಯಕ್, ಶಾರದಾ ಪೈ ದಂಪತಿಯ ಪುತ್ರ. ಗೋವಾದ ಶಿಪ್ಪಿಂಗ್ ಕಂಪೆನಿಯೊಂದರಲ್ಲಿ ತರಬೇತಿ ಪಡೆಯುತ್ತಿದ್ದರು. ಡಿ.18ರಂದು ಅವರು ಚಲಾಯಿಸುತ್ತಿದ್ದ ಬೈಕ್ಗೆ ಕಾರು ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಧುಸೂದನ ನಾಯಕ್ ಅವರು ಕಲ್ಲಬೆಟ್ಟು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಮೂಡುಬಿದರೆ ಮಿತ್ರವೃಂದ, ಹಿಂದೂ ಸಂಘಟನೆಗಳ ಸಕ್ರಿಯ ಸದಸ್ಯರಾಗಿದ್ದರು.
