ಮೂಡುಬಿದರೆ: ಇಲ್ಲಿನ ಆಳ್ವಾಸ್ ಕಾಲೇಜಿನಲ್ಲಿ ಬಾಂಬ್ ಸ್ಪೋಟಿಸುತ್ತೇನೆ ಎಂದು ಅಬ್ದುಲ್ ಖಾನ್ ಟ್ವಿಟರ್ಖಾತೆಯ ಮೂಲಕ ಸಂದೇಶಗಳ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಗೊಳುತ್ತಿದ್ದಂತೆ ವಿದ್ಯಾಗಿರಿ ಆಳ್ವಾಸ್ ಕ್ಯಾಂಪಸ್ನಲ್ಲಿ ಸೋಮವಾರ ಸಂಜೆಯಿಂದಲೇ ಹೆಚ್ಚುವರಿ ಭದ್ರತೆಯನ್ನು ಒದಗಿಸಲಾಗಿದೆ.
ಮೂಡುಬಿದರೆ ವಿದ್ಯಾಗಿರಿ ಆಳ್ವಾಸ್ ಕ್ಯಾಂಪಸ್ಗೆ ಪಣಂಬೂರು ಎಸಿಪಿ ರವಿಕುಮಾರ್, ಮೂಡುಬಿದರೆ ಎಸ್ಐ ರಮೇಶ್ ಕುಮಾರ್ ಸಹಿತ ಹೆಚ್ಚಿನ ಭದ್ರತೆಗಾಗಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಕ್ಯಾಂಪಸ್ ಪರಿಸರದಲ್ಲಿ ಸುತ್ತಾಡುವವರನ್ನು ಕೂಲಂಕುಷವಾಗಿ ತಪಾಸಣೆ ನಡೆಸಿದ ಪೊಲೀಸರು, ಅವರ ಬ್ಯಾಗ್ಗಳನ್ನು ಪರಿಶೀಲಿಸಿದ್ದಾರೆ.
ಬಾಂಬ್ ಸಂದೇಶ ಬಂದ ಹಿನ್ನಲೆಯಲ್ಲಿ ವಿದ್ಯಾಗಿರಿಯಲ್ಲಿ ತಪಾಸಣೆ ನೆಡೆಸುತ್ತಿರುವ ಪೊಲೀಸರು.

ಇನ್ನೊಂದೆಡೆ ಸುದ್ದಿ ತಿಳಿಯುತ್ತಲೇ ರಾಜ್ಯದ ವಿವಿದಡೆಗಳಿಂದ ಡಾ.ಎಂ.ಮೋಹನ್ ಆಳ್ವರಿಗೆ ಕರೆಗಳು ಬರುತ್ತಿದ್ದು, ವಿದ್ಯಾಥರ್ಿಗಳ ಪೋಷಕರು ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತಿತ್ತು. ಆಳ್ವಾಸ್ನ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಹಾಗೂ ವಿವಿಧ ವಿಭಾಗಗಳ ಅಧಿಕಾರಿಗಳು, ಸಿಬ್ಬಂದಿಗಳಿಗೂ ಇದೇ ರೀತಿ ಕರೆಗಳು ಬರುತ್ತಿದ್ದು ಸಾಮಾನ್ಯವಾಗಿತ್ತು. ಪೋಷಕರ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಆಳ್ವಾಸ್ ಸಂಸ್ಥೆಯ 18 ಸಾವಿರಕ್ಕೂ ಅಧಿಕ ವಿದ್ಯಾಥರ್ಿಗಳ ಪೋಷಕರ ಮೊಬೈಲ್ಗಳಿಗೆ ಬಲ್ಕ್ ಮೆಸೇಜ್ಗಳನ್ನು ಕಳುಹಿಸುವ ವ್ಯವಸ್ಥೆ ಮಾಡಲಾಯಿತು. ಅಬ್ದುಲ್ ಖಾನ್ ಎಂಬ ಹೆಸರಿನ ವಿದ್ಯಾಥರ್ಿಗಳು ಸಂಸ್ಥೆಯಲ್ಲಿ ಇಲ್ಲ. ಹಳೆ ವಿದ್ಯಾಥರ್ಿಗಳಿದ್ದಾರೆಯೇ ಎನ್ನುವ ಬಗ್ಗೆ ಪರಿಶೀಸುತ್ತಿದ್ದೇವೆ ಎಂದು ಆಳ್ವಾಸ್ನವರು ಪತ್ರಿಕೆಗೆ ತಿಳಿಸಿದ್ದಾರೆ.
5 ನಿಮಿಷದಲ್ಲಿ ಪತ್ತೆಹಚ್ಚಬೇಕು:
ಸಾಮಾಜಿಕ ಜಾಲತಾಣಗಳ ಮೂಲಕ ಭಯ ಹುಟ್ಟಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ. ಆಧುನಿಕ ತಂತ್ರಜ್ಞಾನಗಳು ಬೆಳೆಯುತ್ತಿದ್ದಂತೆ ನಮ್ಮ ದೇಶದ ರಕ್ಷಣಾ ವ್ಯವಸ್ಥೆಯೂ ಚುರುಕುಗೊಳ್ಳಬೇಕು. ಟ್ವಿಟರ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಭಯ ಉತ್ಪಾಧಿಸುವವರನ್ನು 5 ನಿಮಿಷದಲ್ಲಿ ಬಂಧಿಸುವಂತಹ ವ್ಯವಸ್ಥೆ ಇರಬೇಕು. ಇಲ್ಲವಾದಲ್ಲಿ ಇಂತಹ ಘಟನೆಗಳನ್ನು ಎದುರಿಸುವುದು ಕಷ್ಟವಾಗುತ್ತದೆ ಎಂದು ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಆಳ್ವಾಸ್ ಕ್ಯಾಂಪಸ್ನಲ್ಲಿ ಹೆಚ್ಚಿನ ಭದ್ರತೆಯನ್ನು ಕಲ್ಪಿಸಿದ್ದೇವೆ. ಪೋಷಕರು ಯಾವುದೇ ಆತಂಕ ಪಡೆಬೇಕಾಗಿಲ್ಲ. ಉಳಿದ ದಿನಗಳಲ್ಲೂ ಕ್ಯಾಂಪಸ್ ಭದ್ರತೆ ಹೆಚ್ಚಾಗಿದ್ದು, ಇದೀಗ ಪೊಲೀಸರು ಕೂಡ ನಿಗಾ ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
