ಸುದ್ದಿ9ಮೂಡುಬಿದರೆ: ನಗರದ ಕೊರ್ಪುಸ್ ಕ್ರಿಸ್ತಿ ಚರ್ಚ್ ನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಕ್ಷತ್ರ ದೀಪ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಮೂಡುಬಿದರೆ ಚರ್ಚ್ ವ್ಯಾಪ್ತಿಯ ಕ್ರೈಸ್ತರು ಒಂಬತ್ತು ರೀತಿಯ ಬೃಹತ್ ನಕ್ಷತ್ರದೀಪಗಳನ್ನು ತಯಾರಿಸಿದರು. ಭತ್ತದ ಹಗ್ಗದಿಂದ ತಯಾರಿಸಿದ ನಕ್ಷತ್ರದೀಪದ ಮಧ್ಯೆ ಗೋದಲಿಯನ್ನು ಇರಿಸಿದ್ದು ಆಕರ್ಷಕವಾಗಿತ್ತು. ಹತ್ತಿಯಿಂದ ತಯಾರಿಸಿದ ನಕ್ಷತ್ರ ದೀಪ ಅದರಲ್ಲಿಯೂ ಗೋದಲಿ ಹಾಗೂ ಅದರ ಸುತ್ತ ಅಲಂಕಾರಿಕ ವಸ್ತುಗಳನ್ನು ಅಳವಡಿಸಿದ್ದು, ಹಿಮದ ಮಧ್ಯೆ ಗೋದಲಿ ಇರುವಂತೆ ಕಾಣುತ್ತಿತ್ತು. ಇನ್ನೊಂದು ನಕ್ಷತ್ರದೀಪವನ್ನು ಅರಳುಗಳಿಂದ ಮಾಡಿದ್ದು ಅದರ ಅಂಚಿನಲ್ಲಿ ಅಡಕೆಕಾಯಿ ಹಾಗೂ ಬಾಳೆಹಣ್ಣುಗಳಿಂದ ಆಲಂಕರಿಸಲಾಗಿತ್ತು

