ಪೊಳಲಿ: ದೀಪಾವಳಿ ಪ್ರಯುಕ್ತ “ಪುರಾಲ್ದಪ್ಪೆ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್” ವತಿಯಿಂದ ಸಂತೋಷ್ ಶೆಟ್ಟಿ ಪೊಳಲಿ ಅವರ ಸಾರಥ್ಯದಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಏಳನೇ ವರ್ಷ ತುಪ್ಪದ ದೀಪೋತ್ಸವ ಹಾಗೂ ಕುಣಿತ ಭಜನೆ ಮೇಳೈಸಿತು.


ಆರ್ . ಎಸ್ .ಎಸ್.ನ ಹಿರಿಯರಾದ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರು ಸಂಜೆ ದೀಪಪ್ರಜ್ವಲನಗೈಯುವ ಮೂಲಕ  ದೀಪೋತ್ಸವಕ್ಕೆ ಚಾಲನೆ ನೀಡಿದರು.ಕೇತ್ರದ ಪ್ರಧಾನ ಅರ್ಚಕರಾದ ಅನಂತಪದ್ಮನಾಭ ಭಟ್,ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಸಾಥ್ ನೀಡಿದರು.


ಇದಕ್ಕಾಗಿ ದೇವಳದ ಸುತ್ತ ಸುಮಾರು 100 ದೀಪಗಳನ್ನಿರಿಸಿ ಇದಕ್ಕೆ ಸುಮಾರು 80 ಲೀ.ತುಪ್ಪವನ್ನು ಬಳಸಲಾಗಿತ್ತು. ಸುಮಾರು 15 ವಿವಿಧ ಕುಣಿತ ಭಜನಾ ತಂಡಗಳು ಭಾಗವಹಿಸುವ ಮೂಲಕ ತಮ್ಮ ಪ್ರದರ್ಶನವನ್ನಿತ್ತು ನೆರೆದ ಭಕ್ತರ ಗಮನಸೆಳೆಯಿತು.ತತ್ವಮಸಿ ಭಜನಾ ತಂಡದಿಂದ ಭಜನಾ ಸಂಕೀರ್ತನೆ ನಡೆಯಿತು.ಇದೇ ವೇಳೆ ವಾದ್ಯಗೋಷ್ಠಿಯನ್ನು ಆಯೋಜಿಸಲಾಗಿತ್ತು.ಬಳಿಕ ಉಳಿಪಾಡಿಗುತ್ತು ವಿನಿಂದ ಕೊಡಮಣಿತ್ತಾಯ ದೈವದ ಭಂಡಾರವು ಅಗಮಿಸಿ.ದೊಡ್ಡರಂಗಪೂಜೆ,ಬಲಿ ಉತ್ಸವವು ನೆರವೇರಿತು.ದೇವರ ಮಹಾಪೂಜೆಯ ನಂತರ ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಿತು.

ದೇವಳದ ಆಡಳಿತ ಮೊಕ್ತೇಸರರಾದ ಡಾ.ಮಂಜಯ್ಯ ಶೆಟ್ಟಿ,ಕಾರ್ಯನಿರ್ವಹಣಾಧಿಕಾರಿ ಚಂದ್ರಮೋಹನ್ ,ಸ್ಥಳೀಯ ಪ್ರಮುಖರಾದ ವೆಂಕಟೇಶ್ ನಾವಡ ಪೊಳಲಿ,ಗುರುರಾಜ್,ವಿಜಯ್‌ ಬೆಂಜನಪದವುಸುಕೇಶ್ ಚೌಟ,ಜಗದೀಶ್ ಪಂಪ್ ವೆಲ್ ಮೊದಲಾದವರಿದ್ದರು.

ಡಾ.ಪ್ರಭಾಕರ ಭಟ್ ಅವರಿಗೆ ಶಾಸಕ ರಾಜೇಶ್ ನಾಯ್ಕ್ ಅವರು ಕ್ಷೇತ್ರದಲ್ಲಿ ನಿರ್ಮಿಲುದ್ದೇಶಿಸಿರುವ ಗೋಶಾಲೆ ಹಾಗೂ ವಿವಿಧ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿದರಲ್ಲದೆ ಕ್ಷೇತ್ರದಪರವಾಗಿ ಸ್ಮರಣಿಕೆಯನ್ನಿತ್ತು ಗೌರವಿಸಿದರು.

By Suddi9