ಕೈಕಂಬ : ತುಳುನಾಡಿನ ಯಕ್ಷಗಾನ ಕಲೆ ಅಂತಾರಾಷ್ಟಿçÃಯ ಮಟ್ಟದಲ್ಲಿ ಜನಮನ್ನಣೆ ಗಳಿಸುತ್ತಿದೆ. ಇದು ಕಲಾಸಕ್ತರ ಮನಸ್ಸಿಗೆ ಮುದ ನೀಡುವ ಕಲೆಯಾಗಿದ್ದು, ಧರ್ಮ ಪ್ರಚಾರದ ಜೊತೆಗೆ ಸಂಸ್ಕೃತಿ ಪಸರಿಸುವ ಕೆಲಸ ಮಾಡುತ್ತಿದೆ. ಯಕ್ಷಗಾನ ಕಲೆಯು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣೀಭೂತವಾಗಿದ್ದು, ಈ ಸಂಸ್ಥೆಯು ಕಲೆಗೆ ಪೂರಕ ಕೆಲಸ ಮಾಡುತ್ತಿದೆ ಎಂದು ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಶ್ರೀ ವೇದಮೂರ್ತಿ ಲಕ್ಷಿö್ಮÃನಾರಾಯಣ ಆಸ್ರಣ್ಣ ಅವರು ಹೇಳಿದರು.

ಶ್ರೀ ಕ್ಷೇತ್ರ ಕಟೀಲಿನ ಸರಸ್ವತಿ ಸದನದಲ್ಲಿ ಅ. ೪ರಂದು ಗುರುಪುರ ಕೈಕಂಬದ ಶ್ರೀ ಸುಬ್ರಹ್ಮಣ್ಯೇಶ್ವರ ಕಲಾ ಕೇಂದ್ರ ತಕಧಿಮಿ ತಂಡದ ೬ನೇ ವಾರ್ಷಿಕೋತ್ಸವ `ತಕಧಿಮಿ-೨೦೨೬’ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಶ್ರೀ ವೇದಮೂರ್ತಿ ಕಮಲಾದೇವಿಪ್ರಸಾದ ಆಸ್ರಣ್ಣ ಅವರು ಮಾತನಾಡಿ, ನಮ್ಲಲ್ಲಿ ಸಂಸ್ಕೃತ ಮತ್ತು ಸಂಸ್ಕೃತಿ ಒಳಗೊಂಡ ಕನ್ನಡ ಭಾಷೆ ಬಳಕೆಯಲ್ಲಿದೆ. ಭಾರತೋಈಯ ಭಾಷೆಗಳಂತೆ ತುಳುವಿನಲ್ಲೂ ಸಂಸ್ಕೃತವಿದೆ. ಯಕ್ಷಗಾನದಿಂದ ಲಭಿಸುವಷ್ಟು ಸಂಸ್ಕೃತ, ಸಂಸ್ಕೃತಿ ಬೇರೆ ಯಾವುದೇ ಭಾರತೀಯ ಭಾಷೆಗಳಲ್ಲಿ ಸಿಗದು. ಹಾಗಾಗಿಯೇ ಇದು ಸರ್ವವ್ಯಾಪಿಯಾಗಿದೆ. ಇದರಲ್ಲಿ ಜಾ(ಜ್ಞಾ)ನಪದವೂ ಒಳಗೊಂಡಿದೆ ಎಂದು ಶುಭಾಶಂಸನೆಗೈದರು.

ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಅಗರಿ ರಾಘವೇಂದ್ರ ರಾವ್ ಮಾತನಾಡಿ, ಸಣ್ಣ ಮಕ್ಕಳಿಗೆ ಯಕ್ಷಗಾನ ಕಲೆಯ ಮೇಲೆ ಅಭಿರುಚಿ ಹುಟ್ಟಿಸುವ ಕೆಲಸ ತಕಧಿಮಿ ತಂಡ ಮಾಡುತ್ತಿದೆ. ಈಗ ಹಲವು ಸಂಸ್ಥೆಗಳು ಮಕ್ಕಳಿಗೆ ಯಕ್ಷಗಾನ ಕಲಿಸುತ್ತಿದ್ದು, ಮಕ್ಕಳು ದೇಶ ವಿದೇಶಗಳಲ್ಲಿ ಮಿಂಚುತ್ತಿದ್ದಾರೆ. ಇವರಿಂದ ಪರೋಕ್ಷವಾಗಿ ಯಕ್ಷಗಾನ ಉಳಿಸುವ ಕೆಲಸ ನಡೆಯುತ್ತಿದೆ. ತಕಧಿಮಿ ತಂಡವು ಯಕ್ಷಗಾನ ಕಲೆ ಬೆಳೆಸುವ ನಿಟ್ಟಿನಲ್ಲಿ ಎತ್ತರಕ್ಕೆ ಬೆಳೆಯಲಿ ಎಂದರು.

`ಯುಗಪುರುಷ’ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಉದ್ಯಮಿ ಶ್ರೀಧರ ರಾವ್ ಕೈಕಂಬ ಅವರು ಸಾಮಾಜಿಕ ಕಾಳಜಿ ಹೊಂದಿರುವ ತಕಧಿಮಿ ತಂಡವು ಈವರೆಗೆ ಗೈದಿರುವ ಸಮಾಜಮುಖಿ ಹಾಗೂ ಸಾಂಸ್ಕೃತಿಕ ಕಾರ್ಯಗಳ ಬಗ್ಗೆ ಪ್ರಸಂಶೆ ವ್ಯಕ್ತಪಡಿಸಿದರು.

ಯಕ್ಷಗಾನ ಬಣ್ಣದ ವೇಷಧಾರಿ ಸುಬ್ರಾಯ ಪಾಟಾಳಿ ಸಂಪಾಜೆ, ಯಕ್ಷಗಾನ ಸಂಘಟಕ ಜನಾರ್ದನ ಅಮ್ಮುಂಜೆ ಅವರನ್ನು ಸನ್ಮಾನಿಸಲಾಯಿತು. ಭಜನಾ ತರಬೇತುದಾರ ಸತೀಶ್ ಪೂಂಜ ವಾಮದಪದವು ಮತ್ತು ಯಕ್ಷಗಾನ ನಾಟ್ಯಗುರು ರಕ್ಷಿತ್ ಶೆಟ್ಟಿ ಪಡ್ರೆ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಸನ್ಮಾನಕ್ಕುತ್ತರವಾಗಿ ಜನಾರ್ದನ ಅಮ್ಮುಂಜೆ ಮತ್ತು ಸತೀಶ್ ಪೂಂಜ ಅವರು ಮಾತನಾಡಿದರು. ತಕಧಿಮಿ ತಂಡದಲ್ಲಿದ್ದು, ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ೬ ಮಂದಿ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಭಾಗವತ ಸೋಮಯಾಜಿ ಅವರು ಯಕ್ಷಗಾನ ಭಾಗವತಿಕೆ ಮೂಲಕ ಪ್ರಾರ್ಥನೆಗೈದರು. ತಕಧಿಮಿ ತಂಡದ ಸದಸ್ಯ ಸತೀಶ್ ಶೆಟ್ಟಿ ಕಂದಾವರ ಅವರು ಸ್ವಾಗತಿಸಿದರು. ದಯಾಕರ ಶೆಟ್ಟಿ ಕೈಕಂಬ ಅವರು ತಂಡ ನಡೆದು ಬಂದ ದಾರಿಯ ಬಗ್ಗೆ ಪ್ರಾಸ್ತಾವಿಕ ಮಾತನ್ನಾಡಿದರು. ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಹೋಟೆಲ್ ಉದ್ಯಮಿ ಹರಿರಾವ್ ಕೈಕಂಬ, ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ ಮಲ್ಲಿಗೆಯಂಗಡಿ, ಉದ್ಯಮಿಗಳಾದ ರಾಜೀವ ಕೈಕಂಬ, ನರಹರಿ ರಾವ್ ಕೈಕಂಬ, ಉಮೇಶ್ ಆರ್. ಭಂಡಾರಿ ಕೈಕಂಬ, ಚಂದ್ರಹಾಸ ಶೆಟ್ಟಿ ನಾರಳ, ಜಯರಾಮ ಶೆಟ್ಟಿ ಹಾಗೂ ಸುಬ್ರಹ್ಮಣ್ಯೇಶ್ವರ ಕಲಾ ಕೇಂದ್ರ ಕೈಕಂಬ ಇದರ ಮಾಗದರ್ಶಕ ರಮೇಶ್ ಕುಲಶೇಖರ ಉಪಸ್ಥಿತರಿದ್ದರು. ತಕಧಿಮಿ ತಂಡದ ಸಂಚಾಲಕ ಪುಷ್ಪರಾಜ್ ಕೆ ಹಾಗೂ ತಂಡದ ಪದಾಧಿಕಾರಿಗಳು ಸಹಕರಿಸಿದರು. ಅರಳದ ಓಂ ಶ್ರೀ ಜನಹಿತಾಯ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಮಹೇಶ್ ಶೆಟ್ಟಿ ಕೈಕಂಬ ಅವರು ನಿರೂಪಿಸಿದರು.

ಮಧ್ಯಾಹ್ನ ೨ ಗಂಟೆಗೆ ಭಕ್ತಿ ಸಂಗೀತ, ೩ಕ್ಕೆ ತಂಡದ ವಿದ್ಯಾರ್ಥಿಗಳಿಂದ `ಹರಿ ಸವೋತ್ತಮ’ ಯಕ್ಷಗಾನ ಹಾಗೂ ರಾತ್ರಿ `ಪಾಂಚಜನ್ಯ’, `ಸುದರ್ಶನ ವಿಜಯ’ ಮತ್ತು `ಗಜೇಂದ್ರ ಮೋಕ್ಷ’ ಯಕ್ಷಗಾನ ಪ್ರದರ್ಶನಗೊಂಡಿದ್ದು, ನೂರಾರು ಮಂದಿ ಮಕ್ಕಳ ಮೂಲಕ ಯಕ್ಷಗಾನ ಕಲೆ ಆಸ್ವಾದಿಸಿದರು.

By Suddi9

Leave a Reply

Your email address will not be published. Required fields are marked *