ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಆನೆದೋಡಿ ಎಂಬಲ್ಲಿ ಸೋಮವಾರ ಮುಂಜಾನೆ ಸಿಡಿಲು ಬಡಿದು ಹಾನಿಗೊಳಗಾದ ನಾಗೇಶ್ ಕುಲಾಲ್ ಅವರ ಮನೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆಯ ಬಗ್ಗೆ ಮಾಹಿತಿಪಡೆದ ಶಾಸಕರು ಕುಟುಂಬಕ್ಕೆ ಧೈರ್ಯ ತುಂಬಿದರು. ಮನೆಯ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ತುರ್ತಾಗಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರು ನಿರ್ದೇಶನ ನೀಡಿದರು.ಈ ಘಟನೆಯಿಂದ ನಾಗೇಶ್ ಕುಲಾಲ್ ಅವರ ಪತ್ನಿ ಕುಶಾಲಾಕ್ಷಿ (35) ಅವರು ಗಾಯಗೊಂಡು ತುಂಬೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು, ದೂರವಾಣಿ ಮೂಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಶಾಲಾಕ್ಷಿ ಅವರ ವೈದ್ಯರಿಂದ ಆರೋಗ್ಯ ವಿಚಾರಿಸಿ ಚಿಕಿತ್ಸೆಯ ಕುರಿತು ಮಾಹಿತಿ ಪಡೆದರು.

ಸಿಡಿಲಾಘತಕ್ಜೆ ಮನೆಯ ಕಟ್ಟಡ ಹಾಗೂ ಮನೆಯೊಳಗಿನ ವಸ್ತುಗಳಿಗೂ ಹಾನಿಯಾಗಿದ್ದು,ವಿದ್ಯುತ್ ವಯರ್, ಉಪಕರಣಗಳು ಕರಟಿಹೋಗಿದ್ದು, ಮನೆಯು ಸಂಪೂರ್ಣ ಹಾನಿಗೊಳಗಾಗಿದೆ.
ಈ ಸಂದರ್ಭ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ದಿನೇಶ್ ಶೆಟ್ಟಿ ದಂಬೆದಾರು, ಪುರುಷೋತ್ತಮ ಶೆಟ್ಟಿ ಬರಕ್ಕಿನಡೆ, ಶ್ಯಾಮ್ ಪ್ರಸಾದ್ ಪೂಂಜಾ, ರವಿರಾಮ್ ಶೆಟ್ಟಿ ಕಂಚಾರು, ಮುತ್ತಮ್ಮ ಕುಲಾಲ್, ನರೇಂದ್ರ ಕುಲಾಲ್, ಪ್ರಶಾಂತ್ ಪೂಜಾರಿ ಪಡ್ಡಾಯಿ ಬಾಕಿಮಾರು, ಉಮೇಶ್ ಶೆಟ್ಟಿ ಭಂಡಾರಿಬೆಟ್ಟು, ಗಣನಾಥ್ ಶೆಟ್ಟಿ ಕೊರಗಟ್ಟೆ ಮತ್ತಿತರರು ಉಪಸ್ಥತರಿದ್ದರು.
