ಬಂಟ್ವಾಳ: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಒಂದು ತಿಂಗಳ ಕಾಲ ನಡೆದ “ಮನೆ ಮನೆಗೆ ಗುರುತತ್ತ್ವ ಸಂದೇಶ” ಕಾರ್ಯಕ್ರಮದ ಸಮಾರೋಪ ಸಮಾರಂಭವು ನಿರೂಪಕಿ  ರೇಣುಕಾ  ಕಾಣಿಯೂರ್ ಅವರ  ಐಸಿರಿ ಮನೆಯಲ್ಲಿ ಸಂಪನ್ನಗೊಂಡಿತು.


ಶ್ರೀ ಕ್ಷೇತ್ರ ಕಣಿಯೂರು ಮಹಾಬಲೇಶ್ವರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನಗೈದು, ಸಮಾಜಕ್ಕೆ ಗುರುಗಳ ತತ್ವಸಂದೇಶಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಯುವವಾಹಿನಿ ಮಾಣಿ ಘಟಕ ಕೈಗೊಂಡಿರುವುದು ಶ್ಲಾಘನೀಯ, ಇಂತಹ ಪ್ರಯತ್ನಗಳು ಸಮಾಜದಲ್ಲಿ ಜಾಗೃತಿ ಮೂಡಿಸಿ, ಉತ್ತಮ ಮೌಲ್ಯಗಳೊಂದಿಗೆ ಬದುಕಲು ಪ್ರೇರಣೆ ನೀಡುತ್ತವೆ ಎಂದರು.


ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಮಾತನಾಡಿ,ಯುವವಾಹಿನಿ  ಮಾಣಿ ಘಟಕ ಒಂದು ತಿಂಗಳ ಅವಧಿಯಲ್ಲಿ 23 ಮನೆಗಳಲ್ಲಿ ಗುರುತತ್ತ್ವದ ಸಂದೇಶವನ್ನು ಪಸರಿಸಿರುವುದು ಶ್ಲಾಘನೀಯ ಕಾರ್ಯ ಎಂದರು.ಈ ಸಂದರ್ಭ 23 ದಿನಗಳ ಕಾಲ ನಿರಂತರವಾಗಿ ಭಾಗವಹಿಸಿದ ಭಜನಾ ತಂಡದ ಸದಸ್ಯರನ್ನು ಹಾಗೂ  ಗುರುತತ್ತ್ವ ಸಂದೇಶಕ್ಕೆ ಅವಕಾಶ ಕಲ್ಪಿಸಿದ ಕುಟುಂಬದ ಸದಸ್ಯರನ್ನು ಗೌರವಿಸಲಾಯಿತು.


ಕಾರ್ಯಕ್ರಮದ ಆತಿಥ್ಯ ವಹಿಸಿದ್ದ ನಿರೂಪಕಿ ರೇಣುಕ ಕಾಣಿಯೂರು ಅನಿಸಿಕೆ ವ್ಯಕ್ತಪಡಿಸಿದರಲ್ಲದೆ  ಸೇರಿದ್ದ ಎಲ್ಲರಿಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಸಾಧನ ಸಂದೇಶ ಪುಸ್ತಕ ಹಾಗೂ ತುಳು ಅಕ್ಷರ ಲಿಪಿಯ ಕ್ಯಾಲೆಂಡರವನ್ನು ಕೊಡುಗೆಯಾಗಿ ವಿತರಿಸಿದರು.


  ಯುವ ವಾಹಿನಿ(ರಿ.)ಕೇಂದ್ರ ಸಮಿತಿಯ ಸಾಂಸ್ಕೃತಿಕ ನಿರ್ದೇಶಕ, ನಿರೂಪಕ ದಿನೇಶ್ ಸುವರ್ಣ ರಾಯಿ, ಯುವವಾಹಿನಿ ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಅನುಷ್ಠಾನ ನಿರ್ದೇಶಕ ಲೋಹಿತ್, ಮಾಣಿ ಘಟಕದ ನಾರಾಯಣ ಗುರು ತತ್ವ ಅನುಷ್ಠಾನ ನಿರ್ದೇಶಕ ಶ್ರೀಧರ್ ಪೂಜಾರಿ ಮುಜಲ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಮಾಣಿ ಅಧ್ಯಕ್ಷ ಸುರೇಶ್ ಪೂಜಾರಿ ಸೂರ್ಯ ಉಪಸ್ಥಿತರಿದ್ದರು.


ಘಟಕದ ಮಾಜಿ ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ, ರಮೇಶ್ ಪೂಜಾರಿ ಮುಜಾಲ,ಜಯಪ್ರಕಾಶ್  ಜಯಂತ ಬರಿಮಾರು, ನಾಗೇಶ್ ಕೊಂಕಣಪದವು, ರಾಜೇಶ್ ಸುವರ್ಣ ಬಂಟ್ವಾಳ, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ರಾಜೇಶ್ ಬಿ. ಮೆಸ್ಕಂ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸೋಮಸುಂದರ, ಲೋಕೇಶ್ ಪಲ್ಲತ್ತಿಲ್ಲ, ಬಂಟ್ವಾಳ  ಘಟಕದ ಸಮಾಜಸೇವೆ ನಿರ್ದೇಶಕರಾದ ಚಿನ್ನಾ ಕಲ್ಲಡ್ಕ, ಘಟಕದ ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಮಾಣಿ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಕೊಡಾಜೆ ಸ್ವಾಗತಿಸಿದರು. ಶ್ರೀಧರ್ ಪೂಜಾರಿ ಮುಜಲ ವಂದಿಸಿದರು. ದೀಪಕ್ ಪೆರಾಜೆ ಹಾಗೂ ಭವಿಷ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಿಶ್ವನಾಥ ಪೂಜಾರಿ , ಖಜಾಂಜಿ ತ್ರಿವೇಣಿ ರಮೇಶ್ ಸಹಕರಿಸಿದರು. 

By Suddi9

Leave a Reply

Your email address will not be published. Required fields are marked *