ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಶಿಶು ಮಂದಿರದಿಂದ ೭ನೇ ತರಗತಿಯವರೆಗೆ ಅಧ್ಯಾಪಕರಿಗೆ “ಎಫ್ ಎಲ್ ಎನ್ ಮತ್ತು ಸಿಪಿಪಿ” ಶಿಕ್ಷಕರ ಪುನಶ್ಚೇತನ ಕಾರ್ಯಗಾರ ನಡೆಯಿತು. 
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು. 
 
ಬಾಳ್ತಿಲ ಸಿ ಆರ್ ಪಿ ಪುಷ್ಪಾ ಬಲ್ಲಾಳ್ “ಬುನಾದಿ ಕಲಿಕಾ ಸಾಮರ್ಥ್ಯಗಳು, ಕಲಿಕಾ ಫಲಗಳು, ಕಲಿಕಾ ವಿಧಾನಗಳ ಬಗ್ಗೆ, ಶಿಕ್ಷಕರ ಬೋಧನಾ ಕೌಶಲ್ಯವನ್ನು ಪರಿಣಾಮಕಾರಿಗೊಳಿಸುವುದರ ಜೊತೆಗೆ ಮಕ್ಕಳ ಕಲಿಕೆಯನ್ನು ಸುಲಭಗೊಳಿಸಲು ಚಟುವಟಿಕೆಗಳು, ಆಟಗಳು, ಕಥೆ, ಚಿತ್ರಗಳು ಹಾಗೂ ಬೋಧನಾ ಸಾಮಾಗ್ರಿಗಳನ್ನು ಹೇಗೆ ಬಳಸಬೇಕು. ಮಕ್ಕಳ ಕಲಿಕಾ ಮಟ್ಟವನ್ನು ಗುರುತಿಸಿ, ಕಲಿಕಾ ನ್ಯೂನತೆಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಬೋಧಿಸುವ ವಿಧಾನಗಳನ್ನು ಹಾಗೂ ಸಂಖ್ಯಾ ಜ್ಞಾನವನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಮಾಹಿತಿ ನೀಡಿದರು.
ವಿಟ್ಲ ಸಿಅಸರ್ ಪಿ ಬಿಂದು ಅವರು ಮಕ್ಕಳ ಹಕ್ಕುಗಳು ಹಾಗೂ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ತೆಗೆದು ಕೊಳ್ಳಬೇಕಾದ   ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಕಾರ್ಯಗಾರದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ, ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು , ಸಹ ಮುಖ್ಯೋಪಾಧ್ಯಾಯರಾದ ಸುಮಂತ್ ಆಳ್ವ ಅವರು ಉಪಸ್ಥಿತರಿದ್ದರು.
 
ಕಾರ್ಯಾಗಾರದಲ್ಲಿ‌ ಒಟ್ಟು ೫೬ ಶಿಕ್ಷಕರು ಭಾಗವಹಿಸಿದ್ದರು. ಅಧ್ಯಾಪಕರಾದ ವೇದಾವತಿ ಸ್ವಾಗತಿಸಿ , ಕುಸುಮ ವಂದಿಸಿದರು.

By Suddi9

Leave a Reply

Your email address will not be published. Required fields are marked *