ಬಂಟ್ವಾಳ: ತಾಲೂಕಿನ ಅಣ್ಣಳಿಕೆ ಯಕ್ಷಾಭಿಮಾನಿಗಳು ಮತ್ತು ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಹಿರಿಯ ಯಕ್ಷಗಾನ ಕಲಾವಿದ , ಬಣ್ಣದ ವೇಷದಾರಿ ದಿ. ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಅವರ ಸ್ಮರಣಾರ್ಥ ೧೮ ನೇ ವರ್ಷದ ತಾಳಮದ್ದಳೆ ಕೂಟ ಕಾರ್ಯಕ್ರಮ ಅಣ್ಣಳಿಕೆ ಶ್ರೀ ವಿಘ್ನೇಶ್ವರ ಸಭಾಂಗಣದಲ್ಲಿ ನಡೆಯಿತು

ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷೆ ಗೀತಾ ಪದ್ಮರಾಜ ಬಲ್ಲಾಳ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಅವರು ಮಾತನಾಡಿ, ಯಕ್ಷಗಾನಕ್ಕೆ ದಿ. ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಅವರ ಕೊಡುಗೆ ಅನನ್ಯ. ಅವರು ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅವರ ಪರಂಪರೆಯನ್ನು ಉಳಿಸಿ ಬೆಳೆಸುವುದು ಮುಂದಿನ ಪೀಳಿಗೆಯ ಕರ್ತವ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಅರ್ಥಧಾರಿ ಮುತ್ತಪ್ಪ ಪೂಜಾರಿ ಸಿದ್ದಕಟ್ಟೆ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಹರಿಪ್ರಸಾದ್ ರಾವ್ ಸಿದ್ದೈಕೋಡಿ, ಸಂಘಟಕ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ , ರೋಟರಿಕ್ಲಬ್ ಪದಾಧಿಕಾರಿಗಳಾದ ಸುಮಿತ್ರಾ ಆರ್.ಶೆಟ್ಟಿಗಾರ್,ಆಕಾಶ್ ಅಣ್ಣಳಿಕೆ, ಮತ್ತಿತರರಿದ್ದರು.
ಪ್ರಜ್ವಲ್ ಸಿದ್ದಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಮಚಂದ್ರ ಶೆಟ್ಟಿಗಾರ್ ವಂದಿಸಿದರು. ಬಳಿಕ ಭೀಷ್ಮ ವಿಜಯ ಯಕ್ಷಗಾನ ತಾಳಮದ್ದಳೆ ಕೂಟ ನಡೆಯಿತು.
