ಬಂಟ್ವಾಳ : ಸಮಾಜದ ಪ್ರಗತಿಗೆ ಜ್ಞಾನ ಮತ್ತು ವಿವೇಕ ಅತ್ಯಂತ ಅಗತ್ಯ. ಅಂಧಶ್ರದ್ಧೆ ಹಾಗೂ ಮೂಢನಂಬಿಕೆಗಳಿಂದ ದೂರವಾಗಿ ವಿಚಾರಶೀಲತೆಯನ್ನು ಬೆಳೆಸಿಕೊಂಡಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಮೂಡಬಿದ್ರೆ ಆಳ್ವಾಸ್ ನ ಮನೋರೋಗ ವಿಭಾಗದ ಆಪ್ತ ಸಮಾಲೋಚಕರಾದ ಲೋಹಿತ್ ಕನಪಾದೆ ಹೇಳಿದ್ದಾರೆ.

ಯುವವಾಹಿನಿ (ರಿ ) ಬಂಟ್ವಾಳ ಘಟಕ ಇದರ ಆಶ್ರಯದಲ್ಲಿ ಪೂಂಜಾಲಕಟ್ಟೆ ತೆಂಕಕಜೆಕಾರು ಅಶ್ವಿನ್ ಅಮೀನ್ ಇವರ ನಿವಾಸದಲ್ಲಿ ನಡೆದ ಗುರುತತ್ವವಾಹಿನಿ -80ನೇ ಮಾಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿದ್ದ ಅಜ್ಞಾನ, ಅಸಮಾನತೆ ಹಾಗೂ ಅನಿಷ್ಟ ಆಚರಣೆಗಳ ವಿರುದ್ಧ ಜಾಗೃತಿ ಮೂಡಿಸಿ, ಶಿಕ್ಷಣ ಮತ್ತು ಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಅವರ ಚಿಂತನೆ ಮನುಷ್ಯನನ್ನು ವಿಚಾರಶೀಲನನ್ನಾಗಿ ಮಾಡುವುದರ ಜೊತೆಗೆ ಮಾನವೀಯತೆ, ಸಮಾನತೆ ಮತ್ತು ಸಹೋದರತ್ವದ ಬದುಕಿಗೆ ದಾರಿ ತೋರಿಸುತ್ತದೆ ಎಂದು ಅವರು ಹೇಳಿದರು.
ಯುವವಾಹಿನಿ ಬಂಟ್ವಾಳ ಘಟಕದ ಕೋಶಾಧಿಕಾರಿ ಪ್ರಜಿತ್ ಅಮೀನ್ ಏರಮಲೆ , ನಿರ್ದೇಶಕರಾದ ನವೀನ್ ಕುಡುಮೇರ್, ಶೇಖರ್ ಅಗಲ್ದೋಡಿ .ಸಂಘಟನಾ ಕಾರ್ಯದರ್ಶಿಯಾದ ಚಿಂತನ್ ರಾಜ್ , ಸರಿತಾ ಮೂರ್ಜೆ. ಸದಸ್ಯರಾದ ಯಶೋಧರ ಕಡಂಬಳಿಕೆ ಯತೀಶ್ ಬೊಳ್ಳಾಯಿ , ಮಧುಸೂದನ್ ಮಧ್ವ, ಸದಾನಂದ ವಾಮದಪದವು, ಲಿತೀಶ್ ವಾಮದಪದವು , ತ್ರಿವೇಣಿ ರಾಜೇಶ್ , ಭವ್ಯಶ್ರೀ ಪ್ರಜಿತ್ , ನಾರಾಯಣ ಪಲ್ಲಿಕಂಡ, ಸೌಮ್ಯ ಹಾಗೂ ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕೆ, ನಾಗೇಶ್ ಪೊನ್ನೋಡಿ, ಶಿವಾನಂದ ಎಂ., ಅರುಣ್ ಮಹಾಕಾಳಿಬೆಟ್ಟು , ಹರೀಶ್ ಕೋಟ್ಯಾನ್ ಕುದನೆ ಭಾಗವಹಿಸಿದ್ದರು.
ಕಾರ್ಯಕ್ರಮದ ಭಜನಾ ಸಂಕೀರ್ತನೆಯಲ್ಲಿ ಸಾತ್ವಿಕ್ ದೇರಾಜೆ ಸಂಗೀತ ಸೇವೆ ನೀಡಿದರು. ಅಶ್ವಿನ್ ಅಮೀನ್ ಬಂಟ್ವಾಳ ಅವರು ಸ್ವಾಗತಿಸಿದರು.ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಮಹೇಶ್ ಬೊಳ್ಳಾಯಿ ವಂದಿಸಿದರು. ಘಟಕದ ಅಧ್ಯಕ್ಷರಾದ ಕಿರಣ್‌ರಾಜ್ ಪೂಂಜಾರೆಕೊಡಿ
ಕಾರ್ಯಕ್ರಮ ನಿರೂಪಿಸಿದರು.
