ಬಂಟ್ವಾಳ: ಬಿ ಸಿ ರೋಡಿನಲ್ಲಿ ಸೋಮವಾರ ನಡೆದ ಪ್ರತಿಭಟನಾ ಸಭೆಯಲ್ಲಿ ನ್ಯಾಯವಾದಿ ಪ್ರಸಾದಕುಮಾರ್ ರೈ ಅವರು ಹಿಂದೂ ಕಾರ್ಯಕರ್ತ ಭರತ್ ಕುಮ್ಡೇಲು ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ಪ್ರಕ್ರಿಯೆ ಕುರಿತಂತೆ ಸುಳ್ಳು ಮಾಹಿತಿ ನೀಡಿದ್ದಾರೆಂಬ ಆರೋಪದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಸಾದ್ ಕುಮಾರ್ ರೈ ವಿರುದ್ಧ ದೂರು ದಾಖಲಿಸಿರುವುದನ್ನು ಬಿಜೆಪಿ ಬಂಟ್ವಾಳ ಮಂಡಲ ಕಾನೂನು ಪ್ರಕೋಷ್ಠ ಘಟಕ  ಖಂಡಿಸಿದೆ.

ಇದು ಹಿಂದೂ ಕಾರ್ಯಕರ್ತರ ಪರವಾಗಿ ನ್ಯಾಯಾಲಯದಲ್ಲಿ ಕಾನೂನಾತ್ಮಕವಾಗಿ ಹೋರಾಡುವ ವಕೀಲರ ಧ್ವನಿಯನ್ನು ಹತ್ತಿಕ್ಕುವ ವ್ಯವಸ್ಥಿತ ಹುನ್ನಾರವಾಗಿದೆ ಎಂದು ಬಿಜೆಪಿ ಬಂಟ್ವಾಳ ಮಂಡಲ ಕಾನೂನು ಪ್ರಕೋಷ್ಠ ಸಂಚಾಲಕರಾದ ವೀರೇಂದ್ರ ಎಂ ಸಿದ್ದಕಟ್ಟೆ ಅವರು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ವಕೀಲರಾದ ಪ್ರಸಾದ್ ಕುಮಾರ್ ರೈ ಯವರು ಪ್ರಕರಣದ ಸತ್ಯಾ ಸತ್ಯತೆಯ ಬಗ್ಗೆ ಪ್ರತಿಭಟನಾ ಸಭೆಯಲ್ಲಿ ವಿವರಣೆಯನ್ನು ನೀಡಿದ್ದು, ಆದರೆ ಈ ಪ್ರಕರಣದ ಪ್ರಕ್ರಿಯೆಯ ಬಗ್ಗೆ ತಪ್ಪು ಮಾಹಿತಿ ನೀಡಿ ನ್ಯಾಯಾಂಗ ನಿಂದನೆಯ ಬಣ್ಣ ಬಳಿದು, ಹಿಂದುತ್ವಕ್ಕಾಗಿ ಹೋರಾಡುವ ಕಾರ್ಯಕರ್ತರ ಪ್ರಕರಣಗಳಲ್ಲಿ ನ್ಯಾಯಾಲಯಲ್ಲಿ ವಾದ ಮಂಡಿಸುವ ವಕೀಲರನ್ನು ಬೆದರಿಸುವ ತಂತ್ರದ ಭಾಗವಾಗಿದೆ ಎಂದು ಅವರು ತಿಳಿಸಿದ್ದಾರೆ.


ಇಂತಹ ಕುತಂತ್ರ, ಬೆದರಿಕೆಗೆ, ಹೆದರಿ ಹಿಂದೂ ಕಾರ್ಯಕರ್ತರು, ಮುಖಂಡರು, ವಕೀಲರು ಬೆನ್ನು ತೋರಿಸಿ ಓಡಿ ಹೋಗುವ ಪ್ರಶ್ನೆಯೇ ಇಲ್ಲ. ಕಾರ್ಯಕರ್ತರ ಪರವಾಗಿ ನ್ಯಾಯಾಲಯಲ್ಲಿ ಕಾನೂನಾತ್ಮಕ  ಹೋರಾಟ ನಡೆಸಲು ಶಕ್ತ ವಕೀಲರು ಸದಾ ಸಿದ್ದರಾಗಿದ್ದೇವೆ ಎಂದು ವಕೀಲ ವೀರೇಂದ್ರ ಸಿದ್ದಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರಕಾರ ದಿವಾಳಿಯಾಗಿದ್ದು, ಜನರ ಗಮನ ಬೇರೆಡೆಗೆ ಸೆಳೆಯಲು ಸರಕಾರ ಪೊಲೀಸರನ್ನು ಕೈಗೊಂಬೆಯನ್ನಾಗಿಸಿಕೊಂಡು ಹಿಂದೂ ಕಾರ್ಯಕರ್ತರು, ಮುಖಂಡರು, ಹಿಂದೂ ವಕೀಲರನ್ನು ಗುರಿಯಾಗಿಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಅವರು, ಪೊಲೀಸ್ ಅಧಿಕಾರಿಗಳು  ಸ್ವಂತ ವಿವೇಚನೆಯಿಂದ ಕಾರ್ಯನಿರ್ವಹಿಸಬೇಕು ವಕೀಲರಾದ ಪ್ರಸಾದ್ ಕುಮಾರ್ ರೈ ಅವರ ವಿರುದ್ಧ  ಸುಳ್ಳು ಆರೋಪ ಹೊರಿಸಿ ನೀಡಿರುವ ದೂರವನ್ನು ತಕ್ಷಣ ರದ್ದುಗೊಳಿಸಿ, ದೂರುದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈ ಗೊಳ್ಳಬೇಕೆಂದು ಬಂಟ್ವಾಳ ಬಿಜೆಪಿ ಕಾನೂನು ಪ್ರಕೋಷ್ಠ-  ಸಂಚಾಲಕರಾದ ವೀರೇಂದ್ರ ಎಂ ಸಿದ್ದಕಟ್ಟೆಯವರು ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ 

By Suddi9

Leave a Reply

Your email address will not be published. Required fields are marked *