ಬಂಟ್ವಾಳ: ರಾಜ್ಯ ಸರಕಾರದ ಸಮಾಜ ಕಲ್ಯಾಣ ಸಚಿವ ಕೆ.ಹೆಚ್. ಮುನಿಯಪ್ಪ ಅವರೊಂದಿಗೆ ಬೆಂಗಳೂರಿನ ವಸಂತನಗರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ತುಳು ಭಾಷಿಕ ಆದಿದ್ರಾವಿಡ ಸಮುದಾಯದೊಂದಿಗೆ ಸಂವಾದ ನಡೆಸಲು ಹಾಗೂ ಸಮುದಾಯದ ಮೂಲಕ್ಷೇತ್ರದ ಅಭಿವೃದ್ಧಿಗೆ ಮತ್ತು ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಕುಲಶಾಸ್ತ್ರೀಯ ಅಧ್ಯಯನಕ್ಕಾಗಿ ಸರ್ಕಾರದಿಂದ ಅನುದಾನ ಘೋಷಣೆಯಾಗುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಿದ ಮಾಜಿ ಸಚಿವರಾದ ಬಿ. ರಮಾನಾಥ ರೈ ಅವರನ್ನು ಬಂಟ್ವಾಳ ತಾಲೂಕು ಆದಿದ್ರಾವಿಡ ಸಮುದಾಯದ ವತಿಯಿಂದ ಅಭಿನಂದಿಸಲಾಯಿತು.

ಕಳ್ಳಿಗೆ ನಿವಾಸದಲ್ಲಿ ಮಾಜಿ ಸಚಿವ ರಮಾನಾಥ ರೈ ಅವರನ್ನು ಭೇಟಿಯಾದ ಆದಿದ್ರಾವಿಡ ಸಮುದಾಯದ ಮುಖಂಡರಾದ ಶ್ರೀನಿವಾಸ ಅರ್ಬಿಗುಡ್ಡೆ, ರಾಜ ಚೆಂಡ್ತಿಮಾರ್, ಮೋಹನ್ ಚೆಂಡ್ತಿಮಾರ್, ಚಂದ್ರಹಾಸ ಅರ್ಬಿಗುಡ್ಡೆ, ರಾಮ ಚೆಂಡ್ತಿಮಾರ್, ಮಾಧವ್ ವಿ.ಎಸ್ ಕಡೇಶಿವಾಲಯ, ಸಂತೋಷ್ ಭಂಡಾರಿಬೆಟ್ಟು, ಪ್ರಕಾಶ್ ಅರ್ಬಿಗುಡ್ಡೆ, ಲಕ್ಷ್ಮಣ್ ಚೆಂಡ್ತಿಮಾರ್ ಅವರು ಗೌರವಿಸಿ ಕೃತಜ್ಞತೆ ಸಲ್ಲಿಸಿದರು.
