ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.(ರಿ) ಬಿ ಸಿ ಟ್ರಸ್ಟ್ ಬಂಟ್ವಾಳ ತಾಲೂಕು ಇದರ 2076 ನೇ ಮಧ್ಯವರ್ಜನಾ ಶಿಬಿರದ ತ್ರೈ ಮಾಸಿಕ ಸಭೆ ಮತ್ತು ಅಕ್ಟೋಬರ್ 2 ರಂದು ನಡೆಯಲಿರುವಗಾಂಧಿ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ಯೋಜನಾ ಕಚೇರಿಯ ಉನ್ನತಿ ಸೌಧದಲ್ಲಿ ನಡೆಯಿತು.

ಗ್ರಾಮಾಭಿವೃದ್ಧಿ ಯೋಜನೆಯ  ದಕ್ಷಿಣ ಕನ್ನಡ  ಜಿಲ್ಲಾ 1 ರ ನಿರ್ದೇಶಕ ದಿನೇಶ್ ಡಿ ಸಭೆಯನ್ನು ಉದ್ಘಾಟಿಸಿ ನವಜೀವನ ಸಮಿತಿ ಸದಸ್ಯರಿಗೆ ಮಾಹಿತಿ ಮಾರ್ಗದರ್ಶನ ನೀಡಿದರು. ತಾಲೂಕು ಯೋಜನಾಧಿಕಾರಿ ಜಯಾನಂದ ಪಿ  ಧರ್ಮಸ್ಥಳದ ಅಮೃತವರ್ಷಿಣಿ ಸಭಾ ಭವನದಲ್ಲಿ  ಅಕ್ಟೋಬರ್ 2 ನಡೆಯುವ ಗಾಂಧಿ ಜಯಂತಿ ಕಾರ್ಯಕ್ರಮದ  ಬಗ್ಗೆ ಮಾಹಿತಿ ನೀಡಿದರು. 
ಈ ಸಂದರ್ಭದಲ್ಲಿ  ನವಜೀವನ ಸಮಿತಿ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ  ನವಜೀವನ ಸಮಿತಿ ಸದಸ್ಯರು, ಸೇವಾಪ್ರತಿನಿಧಿ, ನವಜೀವನ ಸಮಿತಿ ಪೋಷಕರು, ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬಿ ಸಿ ರೋಡ್ ವಲಯದ ಸೇವಾಪ್ರತಿನಿಧಿ  ಆಶಾಲತಾ ವಂದಿಸಿದರು. 

By Suddi9

Leave a Reply

Your email address will not be published. Required fields are marked *