ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ (ರಿ )ಬಂಟ್ವಾಳ ತಾಲೂಕು ವಗ್ಗ ವಲಯದ ಇರ್ವತ್ತೂರು, ಚೆನ್ನೈತೋಡಿ “ಎ” “,ಬಿ”ಹಾಗೂ ಕೊಡಂಬೆಟ್ಟು ಒಕ್ಕೂಟಗಳ ಪದಗ್ರಹಣ ಸಮಾರಂಭವು ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ಶ್ರೀಪಾದ ಪಾಂಗಣ್ಣಾಯ ಉದ್ಘಾಟಿಸಿ ಶುಭಹಾರೈಸಿದರು.
ಉದ್ಯಮಿ ಹರೀoದ್ರ ಪೈ ವಾಮದಪದವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಡಿ ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ಹಸ್ತಾಂತರಿಸಿದರು.ಡಾl ರಾಮಕೃಷ್ಣ ಎಸ್ ಇರ್ವತ್ತೂರು,ತಾಲೂಕು ಯೋಜನಾಧಿಕಾರಿ ಜಯಾನಂದ ಪಿ.,ಸ್ಥಲಕೀಯ ಪ್ರಮುಖರಾದ ಗೋಪಾಲಕೃಷ್ಣ ಚೌಟ ವಾಮದಪದವು, ನವೀನ್ ಚಂದ್ರ ಶೆಟ್ಟಿ ಅಜ್ಜಿಬೆಟ್ಟು, ಅರುಣ್ ಕುಮಾರ್ ಇಂದ್ರ ಅಜ್ಜಿಬೆಟ್ಟು ಬಸದಿ, ಪ್ರಕಾಶ್ ಗಟ್ಟಿ ನಿಸರ್ಗ ಬಸ್ತಿಕೋಡಿ, ಶೇಖರ್ ಪೂಜಾರಿ ಅಗಲ್ದೋಡಿ, ಪ್ರವೀಣ್ ಕಾಡಬೆಟ್ಟು ,ವಲಯ ಮೇಲ್ವಿಚಾರಕ ಸುರೇಶ, ವಲಯ ಅಧ್ಯಕ್ಷರು ಉಮೇಶ್ ಕಾಡಬೆಟ್ಟು ಉಪಸ್ಥಿತರಿದ್ದರು,
ಸಂಘದ ಹಿರಿಯ ಸದಸ್ಯರಿಗೆ ಹಾಗೂ ಹಿರಿಯ ನಾಟಿ ವೈದ್ಯರಾದ ವೆಂಕಮ್ಮ ಕೊಡಾಂಬೆಟ್ಟು, ಶೌರ್ಯ ವಿಪತ್ತು ನಿರ್ವಹಣ ಘಟಕದ ಮಾಸ್ಟರ್ ಪ್ರವೀಣ್ ಮತ್ತು ಪ್ರಕಾಶ್ ಪೂಜಾರಿ, ಸ್ಥಳೀಯ ಲೈನ್ ಮ್ಯಾನ್ ಗಳನ್ನು ಮತ್ತು ಭರತನಾಟ್ಯ ನಾಟ್ಯ ವಿದುಷಿ ಸಹನಾ ಶೆಟ್ಟಿ ನರವಲ್ದಡ್ಡ ರವರನ್ನು ಅಭಿನಂದಿಸಲಾಯಿತು.
ಸಂಘದ ಸದಸ್ಯರ ಮಕ್ಕಳ ಉನ್ನತ ವಿದ್ಯಾಭ್ಯಾಸದ ಸುಜ್ಞಾನ ನಿಧಿ ಮಂಜುರಾತಿ ಪತ್ರ, ಸಂಘದ ಸದಸ್ಯರ ಎಲ್ಐಸಿ ವಿಮ ಪಾಲಿಸಿಯ ಮಂಜೂರಾತಿ ಪತ್ರ ವಿತರಿಸಲಾಯಿತು.ಬೆಳಿಗ್ಗೆ ಸಿರಿಗುಂಡದ ಪಾಡಿ ಮಕ್ಕಳ ಕುಣಿತ ಭಜನೆ,ಸಂಘದ ಸದಸ್ಯರಿಮನದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು’
ಸೌಮ್ಯ ಸ್ವಾಗತಿಸಿ,ಸೇವಾ ಪ್ರತಿನಿಧಿ ಭಾರತಿ ಶೆಟ್ಟಿ ಒಕ್ಕೂಟಗಳ ವರದಿ ವಾಚಿಸಿದರು.ಚೆನ್ನೈತೋಡಿ ಸೇವಾ ಪ್ರತಿನಿಧಿ ಮಾಧವ ವಂದಿಸಿದರು.ನಿತಿನ್ ಕಾರ್ಯಕ್ರಮ ನಿರೂಪಿಸಿದರು.ಒಕ್ಕೂಟಗಳ ಅಧ್ಯಕ್ಷರು ಪದಾಧಿಕಾರಿಗಳು ಸೇವ ಪ್ರತಿನಿಧಿಗಳಾದ ಮೋಹನ್ ದಾಸ್ ಗಟ್ಟಿ, ತಾರಾನಾಥ ಸಹಕರಿಸಿದರು
