ಬಂಟ್ವಾಳ: ಹಿಂದೂ ಸಮಾಜದ ಏಳಿಗೆಗೆ ಮುಂಚೂಣಿಯಲ್ಲಿದ್ದು ಶ್ರಮಿಸುತ್ತಿರುವ ,ವಿ.ಹಿಂ.ಪರಿಷತ್, ಬಜರಂಗದಳ ,ಹಿ.ಜಾ.ವೇ.ಸಹಿತ ಅನ್ಯನ್ಯ ಸಂಘಪರಿವಾರ ಸಂಘಟನೆಗಳೆಲ್ಲವು  ಹಿಂದೂ‌ಸಮಾಜದ ಆಸ್ಮಿತೆಯಾಗಿದೆ.ಕರಾವಳಿಜಿಲ್ಲೆ ಯಾವತ್ತಿದ್ದರೂ ಹಿಂದೂ ಸಮಾಜದ ಕೇಂದ್ರವೇ ಆಗಿದ್ದು,ಮುಂದೇಯು ಕೇಂದ್ರವೇ ಅಗಿರುತ್ತದೆ ಹೊರತು ಕಾರ್ಖಾನೆಯಲ್ಲ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಘರ್ಜಿಸಿದರು.

 

ಕೊಲೆ ಪ್ರಕರಣವೊಂದರಲ್ಲಿ ಮೈಸೂರಿನ ವಿಶೇಷ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದ ಬೆನ್ನಲ್ಲೇ ಕರ್ನಾಟಕ ಸರಕಾರ ತುಷ್ಠೀಕರಣದ ಭಾಗವಾಗಿ ಭರತ್ ಕುಮ್ಡೇಲು ಸಹಿತ ಆರು ಮಂದಿಯ ವಿರುದ್ಧ ಗೂಂಡಾಕಾಯ್ದೆ ಜಾರಿಗೊಳಿಸಿ ಅವರನ್ನು ಮತ್ತೆ ಜೈಲಿನಲ್ಲಿಯೇ ಮುಂದುವರಿಯುವಂತೆ ಮಾಡಿರುವ ದುರುದ್ದೇಶಪೂರಿತ ಕೃತ್ಯವನ್ನು  ಖಂಡಿಸಿ ವಿ.ಹಿಂ.ಪ.,ಬಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ  ಬಿ.ಸಿ.ರೋಡಿನ ಶ್ರೀರಕ್ತೇಶ್ವರೀ ದೇವಸ್ಥಾನದ ವಠಾರದಲ್ಲಿ  ಸೋಮವಾರ ನಡೆದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಶ್ರೀಗಳು ಮಾತನಾಡಿದರು.
ಭಾರತದ ಪ್ರಧಾನ ನಾಯಕನೇ ಸಿಂಹದಂತೆ ಹೆಜ್ಜೆ ಹಾಕುತ್ತಿದ್ದು,ಇಡೀ ಜಗತ್ತೇ ಭಾರತದ ಹಿಂದೂ ಧರ್ಮದ ಮುಂದೆ ಮಂಡಿಯೂರುತ್ತಿದ್ದಾರೆ.ಆದರೆ ಇಲ್ಲಿಯವರೇ ಇದರ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ.ಒಬ್ಬ ಭರತನನ್ನು ಮಟ್ಟ ಹಾಕಲು ಹೊರಟರೆ ಸಾವಿರಾರು ಮಂದಿ ಭರತರು ಹುಟ್ಟಿಕೊಳ್ಳುತ್ತಾರೆ ಎಂದರು.
ಹಲವು ದಶಕದ ಹಿಂದೆ ಎಂಬಿಬಿಎಸ್ ಪಡೆದು ರೋಗಿಗಳ ಚಿಕಿತ್ಸೆ ಮಾಡಬೇಕಾಗಿದ್ದ ಡಾ.ಪ್ತಭಾಕರ ಭಟ್ ಅವರು ಅದೆಲ್ಲವನ್ನು ಬಿಟ್ಟು ಸಮಾಜದ ಕೆಲಸದಲ್ಲಿ ನಿಸ್ವಾರ್ಥಭಾವನೆಯಲ್ಲಿ ತೊಡಗಿಸಿಕೊಂಡು ಹಿಂದೂ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ.ಅಂತಹವರಿಗೆ ಪೊಲೀಸರು ನೊಟೀಸ್ ಜಾರಿಗೊಳಿಸಿ ಪ್ರಕರಣದಲ್ಲಿ ಸಿಲುಕಿಸಲು ಹುನ್ನಾರ ನಡೆಸುತ್ತಿರುವುದು ಖಂಡನೀಯವಾಗಿದೆ ಎಂದ ಶ್ರೀಗಳು ಕಾನೂನಿನ ಅರಿವಿರುವ ಪೊಲೀಸ್ ಅಧಿಕಾರಿಗಳು ಈ ರೀತಿ ಮಾಡುವುದು ಸರಿಯಲ್ಲ, ಡಾ. ಪ್ರಭಾಕರ ಭಟ್ ಅವರಿಗೆ ನೋಟೀಸ್ ಕೊಡಲು ಹೇಳಿರುವ ಮಹಾನ್ ನಾಯಕರ ಹೆಸರು ಬಹಿರಂಗಪಡಿಸಿ  ಎಂದು ಸವಾಲೆಸೆದರು.


ಎಸ್ಪಿ ಕಚೇರಿ ಚಲೋಗೂ ಹಿಂಜರಿಯಲ್ಲ:-
ಪ್ರಧಾನ ಭಾಷಣಗೈದ ಹಿ.ಜಾ.ವೇ.ಪ್ರಾಂತ ಸಹ ಸಂಯೋಜಕ ಸತೀಶ್ ದಾವಣಗೆರೆ ಅವರು, ಪೊಲೀಸ್ ಅಧಿಕಾರಿಗಳು ಹಿಂದೂ ಸಮಾಜದ ಕಣ್ಣಿಗೆ ಸುಣ್ಣ ಹಚ್ಚಿ ಒಂದು ಕೋಮನ್ನು ಒಲೈಸುವುದನ್ನು ನಿಲ್ಲಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಎಸ್ಪಿಕಚೇರಿ ,ಕಮೀಷನರ್ ಕಚೇರಿಗೆ ಚಲೋ ನಡೆಸಲು ನಾವು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು.

 
;


ಕರಾವಳಿಯಲ್ಲಿ ಗೋಹತ್ಯೆ ಮಾಡುವವರು ಕೋಮು ದ್ವೇಷನ್ನು ಬಿತ್ತುವವರ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳುಸುವ ಬದಲು ಹಿಂದೂ ಕಾರ್ಯಕರ್ತರನ್ನು ಗುರಿ ಮಾಡಿದ್ದರಲ್ಲ,ನಾವು ಗಾಂಧಿ,ನೆಹರು ಅವರನ್ನು ನೋಡಿ ಹಿಂದೂ ಸಂಘಟನೆ ಮಾಡಿಲ್ಲ,ವೀರ ಸಾರ್ವಕರ್ ನಮಗೆ ಆದರ್ಶ,ಜೈಲು,ಬೂಟು,ಲಾಠಿ ನಮಗೆ ಲೆಕ್ಕಕ್ಕಿಲ್ಲ ಎಂದರು.


ಮುಖ್ಯ‌ಮಂತ್ರಿ ಡಿ.ಕೆ.ಶಿವಕುಮಾರ್ ರವರು ಕರಾವಳಿಯನ್ನು ತಮ್ಮ ತೆಕ್ಕಗೆ ತೆಗೆದುಕೊಳ್ಳಲು  ಶ್ರಮಿಸುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ಕರಾವಳಿಯ ಚುನಾಯಿತ ಜನಪ್ರತಿನಿಧಿಗಳು ಹಿಂದೂ ಕಾರ್ಯಕರ್ತರ ಬೆನ್ನಿಗೆ ನಿಲ್ಲಬೇಕು ಎಂದರು.


ಕರ್ನಾಟಕ ಪೊಲೀಸರಿಗೆ ವಿಶೇಷವಾದ ಗೌರವವಿದ್ದು,ಪೊಲೀಸ್ ಅಧಿಕಾರಿಗಳು ಸರಕಾರದ ಸೇವಕನಾಗದೆ ಜನರ ಸೇವಕರಾಗಿ ಕಾರ್ಯನಿರ್ವಹಿಸಬೇಕು,ಕರಾವಳಿಯ ಜನರು ದೇಶಭಕ್ತರಾಗಿದ್ದು,ಇಲ್ಲಿನ  ಮಣ್ಣಿನ ಸಂಸ್ಕೃತಿ,ಹಿಂದೂ ಕಾರ್ಯಕರ್ತರ ಮಾನಸಿಕತೆಯನ್ನು ಅರಿತುಕೊಂಡು ಕಾರ್ಯನಿರ್ವಹಿಸಿ ಎಂದ ಅವರು ಹಿಂದೂ ಕಾರ್ಯಕರ್ತರು ತಮ್ಮ ಕಿಸೆಯಿಂದ ಖರ್ಚು ಮಾಡಿ ಸಂಘಟನೆಗೆ ಶ್ರಮಿಸುತ್ತಿದ್ದಾರೆ.ಅಂತಹ ದೇವರ್ದುಲಬ ಕಾರ್ಯಕರ್ತರನ್ನು ಹತ್ತಿಕ್ಕುವ ಕೆಲಸವನ್ನು ಇಂದಿಗೆ ಬಿಟ್ಟು ಬಿಡಿ ಎಂದರು.
ಪೊಲೀಸರಿಗೆ ಸುಫಾರಿ ಕೊಡಲಾಗಿದೆಯೆ?:
ಬಜರಂಗದಳದ ಪ್ರಾಂತ ಸಂಯೋಜಕ್   ಪ್ರಭಂಜನ್ ಸೂರ್ಯಾ ಅವರು ಮಾತನಾಡಿ,
ಕಾಂಗ್ರೆಸ್ ನ ಒಲೈಕೆ ರಾಜಕಾರಣ ನೋಡಿದರೆ ನಾವುಭಾರತದಲ್ಲಿದ್ದೆವೆಯಾ,ಪಾಕಿಸ್ತಾನದಲ್ಲಿದ್ದೆವೆಯಾ ಎಂಬ ಅನುಮಾನ ಬರುತ್ತದೆ.

ಬಜರಂಗದಳವನ್ನು ಬ್ಯಾನ್ ಮಾಡುವುದಕ್ಕೆ ಪೊಲೀಸ್ ಇಲಾಖೆಗೆ ಸರಕಾರ ಸುಫಾರಿ ಕೊಟ್ಟಿರುವಬಹುದೇ ಎಂದು ಅನಿಸುತ್ತಿದೆ ಇಂತಹ ಗೊಡ್ಡ ಬೆದರಿಕೆಗೆ ನಾವು ಹೆದರುವುದಿಲ್ಲ ಎಂದರು.
ಕರಾವಳಿಯಲ್ಲಿ ಸಂಘಟನೆಯ ಕಾರ್ಯಕರ್ತರ ಹೋರಾಟದ ಕಿಚ್ಚು ನಮಗೆ ಪ್ರರೇಣೆಯಾಗಿದೆ.
ಪೊಲೀಸ್ ಅಧಿಕಾರಿಗಳಿಗೆ ರಾಜಕಾರಣ ಮಾಡುವ ಚಟವಿದ್ದರೆ ತಮ್ಮ ಸಮವಸ್ತ್ರ ಬಿಚ್ಚಿ ಬನ್ನಿ ,ನಾವು ಅದೇರೀತಿಯಲ್ಲಿ ಎದುರಿಸುತ್ತೆವೆ.ಈಗ ಇಲ್ಲಿ ನಡೆಯುಂತಹದ್ದು ಟ್ರಾಯಲರ್‌ಮಾತ್ರ ಇದೇರೀತಿ ನಿಮ್ಮ ವರ್ತನೆ ಮುಂದುವರಿದರೆ ಪಿಚ್ಚರ್ ನ್ನು ತೋರಿಸಬೇಕಾದೀತು ಎಂದು ಎಚ್ಚರಿಸಿದರು.

ವಿ.ಹಿಂಪ.,ಬಜರಂಗದಳ ಬಂಟ್ವಾಳ ಪ್ರಖಂಡ ಅಧ್ಯಕ್ಷ,ನ್ಯಾಯವಾದಿ ಪ್ರಸಾದ್ ಕುಮಾರ ರೈ ಸ್ವಾಗತಿಸಿ, ಪ್ರಸ್ತಾವನೆಗೈದು ಕೊಲೆ ಪ್ರಕರಣದ ಹಿನ್ನಲೆಯಲ್ಲಿ ಭರತ್ ಸಹಿತ ಇತರರ  ವಿರುದ್ದ  ಸರಕಾರ ಪೊಲೀಸ್ ಅಧಿಕಾರಿಗಳನ್ನು ದುರುಪಯೋಗಪಡಿಸಿ ಹಂತ,ಹಂತವಾಗಿ ತುಷ್ಠೀಕರಣ ನೀತಿ ಅನುಸರಿಸಿರುವುದನ್ನು ಸಭೆಯ ಮುಂದಿಟ್ಟರು.
 
ಈ ಹಿಂದಿನ ಪೊಲೀಸ್ ಕಮಿಷನರ್,ಎಸ್ಪಿಯವರನ್ನು ಬದಲಾಯಿಸುವ ಮೂಲಕ ಕಾಂಗ್ರೆಸ್ ಸರಕಾರ ಒಂದು ವರ್ಗದ ಮತಕ್ಕಾಗಿ ತುಷ್ಠೀಕರಣ ನೀತಿಯನ್ನು ಆರಂಭಿಸಿತು ಎಂದು ಪ್ರಸಾದ್ ಕುಮಾರ್ ಅವರು. ಐಪಿಎಸ್ ಅಧಿಕಾರಿಯಾಗಿರುವ ಎಸ್ಪಿ,ಪೊಲೀಸ್ ಅಧಿಕಾರಿಗಳು ಸಂವಿಧಾನವನ್ನು ಗೌರವಿಸಿಕೊಂಡು ತಮ್ಮ ವಿವೇಚನೆಯನ್ನು‌ ಬಳಸಿ ಕಾರ್ಯನಿರ್ವಹಿಸಬೇಕಿತ್ತು.ಆದರೆ ಅಧಿಕಾರಿಗಳು ಒಲೈಕೆಯ ರಾಕ್ಷಸಿ ಪೃವೃತ್ತಿಯನ್ನಾಗಿಸಿಕೊಂಡು ಹಿಂದೂ ಕಾರ್ಯಕರ್ತರನ್ನು ದಮನಿಸಲು ಹೊರಟಿದೆ ಎಂದು ಆಕ್ರೊಇಶ ವ್ಯಕ್ತಪಡಿಸಿದರು.ಇಂತಹ ಬೆದರಿಕೆಗೆ ಹಿಂದೂ ಸಮಾಜ ಬೆನ್ನು ಹಾಕಿ ಓಡುವ ಸಮಾಜವಲ್ಲ, ಎಂದರು.

ವಿ.ಹಿಂ.ಪ. ಮುಖಂಡಗೋಪಾಲಕುತ್ತಾರ್, ವಿ.ಹಿಂಪ,ಬಜರಂಗದಳ ಕಾರ್ಯದರ್ಶಿ ಸಚ್ಚಿನ್ ಕುಮಾರ  ವೇದಿಕೆಯಲ್ಲಿದ್ದರು.

ಜಿಲ್ಲಾ ಸಂಯೋಜಕ ಲೋಹಿತ್ ಪಣೋಲಿಬೈಲ್  ವಂದಿಸಿದರು.ಭಾಸ್ಕರ ರಾವ್ ಬಿ.ಸಿ.ರೋಡು ಪ್ರೇರಣಾ ಗೀತೆ ಹಾಗೂ ಗಂಗಾಧರ ಮಾಣಿ ವಂದೇ ಮಾತರಂ ಗೀತೆ ಹಾಡಿದರು.

ಸಾಮೂಹಿಕವಾಗಿ ಚಹನುಮಾನ್ ಚಾಲಿಸ್ ಪಠಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪ್ರತಿಭಟನಾ ಸಭೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್, ಡಾ. ಕಮಲ ಪ್ರಭಾಕರ ಭಟ್, ಶಾಸಕರಾದ ರಾಜೇಶ್ ನಾಯ್ಕ್ ,ಭಾಗೀರಥಿ ಮುರುಳ್ಯ, ಡಾ. ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ವಿಧಾನಪರಿಷತ್‌ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಸಂಜೀವ ಮಠಂದೂರು, ಬಿಜೆಪಿ ಪ್ರಮುಖರಾದ ಸಂದೇಶ್ ಶೆಟ್ಟಿ ಅರೆಬೆಟ್ಟು, ಆರ್. ಚೆನ್ನಪ್ಪ ಕೋಟ್ಯಾನ್, ಸುದರ್ಶನ ಬಜ, ಶಿವಪ್ರಸಾದ್‌ ಶೆಟ್ಟಿ, ದಿನೇಶ್‌ ಅಮ್ಮೂರು,ಸುಲೋಚನಾ ಭಟ್ , ವಿಕಾಸ್ ಪುತ್ತೂರು,ಗೋವಿಂದ ಪ್ರಭು,ದಿನೇಶ್ ಭಂಡಾರಿ, ಪ್ರಭಾಕರ ಪ್ರಭು ದೇವಪ್ಪ ಪೂಜಾರಿ, ರಾಮದಾಸ ಬಂಟ್ವಾಳ, ರಶ್ಮಿತ್ ಶೆಟ್ಟಿ ಕೈತ್ರೋಡಿ, ಅಶೋಕ್ ಶೆಟ್ಟಿ ಸರಪಾಡಿ,ಹಿಂದೂ ನಾಯಕರಾದ ನರಸಿಂಹ ಮಾಣಿ, ಸುನಿಲ್ ಕೊಟ್ಟಾರಿ, ಸಂತೋಷ್‌ ಸರಪಾಡಿ, ಭುಜಂಗ ಕುಲಾಲ್ ,ಮುರಳೀಕೃಷ್ಣ ಹಂಸತಡ್ಕ,  ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

By Suddi9

Leave a Reply

Your email address will not be published. Required fields are marked *