ಬಂಟ್ವಾಳ:ತಾಲೂಕಿನ ಉಳಿಗ್ರಾಮದ ಕಕ್ಕೆಪದವಿನಲ್ಲಿರುವ ಸುವರ್ಣಸೌಧ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಜಾಸೇವೆ ಅಂದೋಲನ ಸಭೆಯಲ್ಲಿ ವಿವಿಧ ಇಲಾಖೆಗೆ ಸಂಬಂಧಿಸಿದಂತೆ 108 ಅರ್ಜಿಗಳು ಸ್ವೀಕೃತವಾಗಿದೆ.
ಈ ಅರ್ಜಿಗಳ ವಿಲೇಗಾಗಿ ಆಯಾಯ ಇಲಾಖೆಗೆ ಕಳಿಸಲಾಗಿದೆ.
ಈ ಅರ್ಜಿಗಳ ವಿಲೇಗಾಗಿ ಆಯಾಯ ಇಲಾಖೆಗೆ ಕಳಿಸಲಾಗಿದೆ.

ಪ್ರಜಾಸೇವೆ ಅಂದೋಲನದಲ್ಲಿ ಪಿಂಚಣಿ ದೊರಕದಿರುವುದು,ಜಮೀನಿನ ಸರ್ವೇ ಸಹಿತ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿ ಅರ್ಜಿ ಗಳು ಸ್ವೀಕೃತವಾದವು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಪ್ರಜಾಸೇವೆ ಅಂದೋಲನವನ್ನು ಉದ್ಘಾಟಿಸಿ, ಜನರ ಸಮಸ್ಯೆಗಳನ್ನುಅಲಿಸಿ ಅದಕ್ಕೆ ತ್ವರಿತವಾಗಿ ಪರಿಹಾರ ನೀಡುವ ನಿಟ್ಟಿನಲ್ಲಿ ಸರಕಾರಿ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ನೇರವಾಗಿ ಜನರ ಬಳಿ ಬರುತ್ತಿದ್ದು,ಜನಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಸ್ವೀಕೃತವಾಗುವ ಅರ್ಜಿಯನ್ನು ಒಂದು ತಿಂಗಳ ಒಳಗಾಗಿ ವಿಲೇ ಮಾಡಲಾಗುತ್ತಿದ್ದು,ಬಳಿಕಇದರ ಪ್ರಗತಿಯನ್ನು ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು. ಪಂಚಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷೆ ಜಯಂತಿ ಪುಜಾರಿ ಅತಿಥಿಯಾಗಿ ಭಾಗವಹಿಸಿ,ಪ್ರಜಾಸೆವೆ ಅಂದೋಲನದ ಒಂದೇ ಸೂರಿನಡಿಯಲ್ಲಿ ಎಲ್ಲಾ ಇಲಾಖಾಧಿಧಿಕಾರಿಗಳು ಸೇರುತ್ತಿದ್ದು,ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ಲಖಿತವಾಗಿ ಅಧಿಕಾರಿಗಳ ಮುಂದೆ ಸಲ್ಲಿಸಿ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದರು.
ಬಂಟ್ವಾಳ ತಹಶೀಲ್ದಾರ್ ಜಿ.ಮಂಜುನಾಥ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಚ್ಚಿನ್ ಕುಮಾರ್,ಉಪ ತಹಶೀಲ್ದಾರ್ ನರೇಂದ್ರ ಮಿತ್ತೂರು,ಅಶಿಫ್ ಇಕ್ಬಾಲ್ ಮೊದಲಾದವರು ಉಪಸ್ಥಿತರಿದ್ದರು.ಉಪತಹಶೀಲ್ದಾರ್ ನವೀನ್ ಕುಮಾರ್ ಬೆಂಜನಪದವು ಸ್ವಾಗತಿಸಿ,ವಂದಿಸಿದರು.
