ಬಂಟ್ವಾಳ: ರಾಷ್ಟ್ರೀ ಸ್ವಯಂ ಸೇವಕ ಸಂಘದ ಕಟ್ಟಾಳು, ಬಿಜೆಪಿಯ ಹಿರಿಯ ಕಾರ್ಯಕರ್ತರು,
ಬಂಟ್ವಾಳ ಪುರಸಭೆಯ ಮಾಜಿ ಸದಸ್ಯರಾದ ಪಾಣೆಮಂಗಳೂರು ನಿವಾಸಿ ದಿ.ಪಾಡುರಂಗ ಪ್ರಭು ಅವರಿಗೆ ನುಡಿನಮನ ಕಾರ್ಯಕ್ರಮವು ಪಾಣೆಮಂಗಳೂರು ವೀರ ವಿಠ್ಠಲ ದೇವಸ್ಥಾನದಲ್ಲಿ  ನಡೆಯಿತು. 
 
 ಬಂಟ್ವಾಳ  ಶಾಸಕರಾದ ರಾಜೇಶ್ ನಾಯ್ಕ ರವರು ಕಾರ್ಯಕ್ರಮ ಉದ್ಘಾಟಿಸಿ  ನುಡಿನಮನ ಸಲ್ಲಿಸಿದರು. ಬಳಿಕ  ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ ಇವರು ಮಾತನಾಡಿ ಅವಿವಾಹಿತರಾಗಿದ್ದ ಪಾಡುರಂಗ ಪ್ರಭು ಅವರು ತಮ್ಮ ಯೌವನದ ದಿನಗಳಲ್ಲಿ ಹೆಗಲಗೆ ಕೇಸರಿ ಶಾಲು ಧರಿಸಿಕೊಂಡು ಸಂಘ, ಪಕ್ಷ ಹಾಗೂ ಹಿಂದುತ್ವದ ಚಟುವಟಿಕೆಗಳಿಗೆ ತನ್ನನ್ನು ಮುಡಿಪಾಗಿಟ್ಟು ಪಕ್ಷದ ವಿವಿಧ ಕ್ಷೇತ್ರಗಳಲ್ಲಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದು, “ ಪಾಂಡು ಮಾಮ್ ” ಎಂದೇ ಗುರುತಿಸಿಕೊಂಡಿದ್ದ ನೆನಪುಗಳನ್ನು ಹಂಚಿಕೊಂಡರು. 
 
ವೀರ ವಿಠ್ಠಲ ದೇವಸ್ಥಾನದ ಆಡಳಿತ ಮೊಕ್ತೆಸರರಾದ ಪ್ರಮೋದ್ ಭಟ್, ವೇದ ಮೂರ್ತಿ ಜನಾರ್ಧನ ಭಟ್, ಯಂ.ಯನ್ ಕುಮಾರ್ ಅವರು ದೀನದಯಾಳ್ ಪಾಂಡು ಮಾಮ್ ರವರಿಗೆ ಗುಣಗಾನ ಗೈದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಾಗೂ ಬಿ.ಜೆ.ಪಿ ಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ಶ್ರೀನಿವಾಸ ಭಟ್ ಕಾರ್ಯಕ್ರಮ ಸಂಯೋಜಿಸಿದರು.

By Suddi9

Leave a Reply

Your email address will not be published. Required fields are marked *