ಬಂಟ್ವಾಳ: ಮೆಲ್ಕಾರ್ ಸಮೀಪದ  ಬೋಳಂಗಡಿಯಲ್ಲಿ “ಫ್ರೆಂಡ್ಸ್ ಮೆಲ್ಕಾರ್” ವತಿಯಿಂದ ಕೆಸರದ ಕಂಡಡ್ “ಗೌಜಿ ಗಮ್ಮತ್” ಕಾರ್ಯಕ್ರಮ ನಡೆಸಲಾಯಿತು. 
 
  ಸ್ಥಳೀಯ ಮುಖಂಡರಾದ ಎಂ.ಎನ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಮಣ್ಣಿನಲ್ಲಿ ನಮ್ಮ ಸತ್ವ ಅಡಗಿದೆ ಕೆಸರಿನೊಳಗೆ ನಮ್ಮ ಬದುಕಿದೆ ಆ ಬದುಕಿನ ಉಸಿರೇ ಕೃಷಿ. ಕೆಸರನ್ನು ಮೆತ್ತಿಕೊಳ್ಳುವ ಮೂಲಕ ಯುವ ಜನಾಂಗಕ್ಕೆ ಕೃಷಿ ಸಂಸ್ಕೃತಿಯನ್ನು ನೆನಪಿಸುವ ಅವಶ್ಯಕತೆ ಇದೆ ಎಂದರು.
 
ಗುರುಜ್ಯೋತಿ ಶ್ರೀನಿವಾಸ ಪೂಜಾರಿ , ಯುವ ಸಂಗಮದ ಅಧ್ಯಕ್ಷರಾದ ಪೂರ್ಣೆಶ್ ಅಚಾರ್ಯ, ಗಂಗಾಧರ ಪೂಜಾರಿ, ಗಣೇಶ್, ವಸಂತಿ ಟೀಚರ್, ಪ್ರಭಾಕರ ಗಾಂಭೀರ್, ರಾಘವ ಪೂಜಾರಿ,  ನಿವೃತ್ತ ಪೊಲೀಸ್ ಅಧಿಕಾರಿ  ಪ್ರಕಾಶ್ , ಫ್ರೆಂಡ್ಸ್ ಮೆಲ್ಕಾರ್  ಅಧ್ಯಕ್ಷರಾದ ಯೋಗೀಶ್ ಅಚಾರ್ಯ ಮೊದಲಾದವರಿದ್ದರು.
ಬಳಿಕ ವಿವಿಧ ಆಟೋಟ ಸ್ಪರ್ಧೆ ನಡೆಯಿತು‌.ನೂರಾರು ಮಂದಿ ಸ್ಪರ್ಧಾಳುಗಳು ಭಾಗವಹಿಸಿ ಸಂಭ್ರಮಿಸಿದರು

By Suddi9

Leave a Reply

Your email address will not be published. Required fields are marked *