ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ವತಿಯಿಂದ ಬಿ.ಸಿ.ರೋಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿ.ಮೂಡ ಆಯೋಜನೆಯಲ್ಲಿ ಬಂಟ್ವಾಳ ನಗರ ವಲಯ ಮಟ್ಟದ 14ರ ವಯೋಮಾನದ ಬಾಲಕ, ಬಾಲಕಿಯರ ವಾಲಿಬಾಲ್ ಪಂದ್ಯಾಟ ಶುಕ್ರವಾರ ಬಿ.ಸಿ.ರೋಡಿನ ಬಿ.ಮೂಡ ಅಜ್ಜಿಬೆಟ್ಟುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ನಡೆಯಿತು.

ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ಪಂದ್ಯಾಕೂಟ ಉದ್ಘಾಟಿಸಿ ಮಾತನಾಡಿ, ಶಿಕ್ಷಣಕ್ಕೆ ಪೂರಕವಾಗಿ, ಕ್ರೀಡೆಯ ಒಂದು ಭಾಗವಾಗಿರುವ ವಾಲಿಬಾಲ್ ಪಂದ್ಯಾಟವನ್ನು ಬಿ.ಮೂಡ ಶಾಲೆಯಲ್ಲಿ ಆಯೋಜಿಸಲಾಗಿದೆ. ಇರುವ ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಂಡು ತಾಲೂಕು ಮಟ್ಟದ ಕ್ರೀಡಾಕೂಟ ರೀತಿಯಲ್ಲಿ ಏರ್ಪಡಿಸಿರುವ ಬಿ.ಮೂಡ ಶಾಲೆಯ ಶಿಕ್ಷಕ ವೃಂದ ಮತ್ತು ಎಸ್.ಡಿ.ಎಂ.ಸಿ. ಅಭಿನಂದನಾರ್ಹರು.   ಎಂದರು.

ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಸ್ವತಃ ಕ್ರೀಡಾಪಟುವಾಗಿರುವ ತಾನು ಬೆಳೆದುಬಂದ ಹಾದಿಯನ್ನು ವಿವರಿಸಿ, ಎಳವೆಯಲ್ಲೇ ಶಿಸ್ತು, ಸಂಯಮ ಹಾಗೂ ಛಲವಿದ್ದರೆ ಕ್ರೀಡೆಯಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೇರಲು ಸಾಧ್ಯ ಎಂದರು.

ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್ ಮಾತನಾಡಿ, ಸ್ಪರ್ಧೆ ಮಳೆಯ ಕಾರಣದಿಂದ ಮುಂದೂಡಲ್ಪಟ್ಟು ಇದೀಗ ನಡೆಯುತ್ತಿದೆ, ಕ್ರೀಡಾಕೂಟ ಯಶಸ್ಸಿಗೆ ಎಲ್ಲರ ಸಹಕಾರ ದೊರಕಿದೆ ಎಂದರು.

ಪಂದ್ಯಾಟಕ್ಕೆ ವಾಲಿಬಾಲ್ ಆಟವಾಡುವುದರ ಮೂಲಕ ಲಯನ್ಸ್ ಕ್ಲಬ್ ಬಂಟ್ವಾಳ ಮಾಜಿ ಅಧ್ಯಕ್ಷ ಪ್ರಶಾಂತ್ ಕೋಟ್ಯಾನ್ ಚಾಲನೆ ನೀಡಿದರು.

ಅಧ್ಯಕ್ಷತೆಯನ್ನು ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷೆ ವಿನೋದಾ ವಹಿಸಿ ಶುಭ ಹಾರೈಸಿದರು.

ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಗಣೇಶ್ ಕಾಮಾಜೆ, ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್ ರೈ, ಬಂಟ್ವಾಳ ತಾಲೂಕು ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ರೈ, ನೋಡೆಲ್ ಶಿಕ್ಷಕರಾದ ಜಯಂತ್ ಪೊಳಲಿ, ಚಂದ್ರಹಾಸ ಶೆಟ್ಟಿ, ಬಿ.ಮೂಡ ಅಜ್ಜಿಬೆಟ್ಟು ಸರಕಾರಿ ಹೈಸ್ಕೂಲ್ ಮುಖ್ಯ ಶಿಕ್ಷಕಿ ಗೀತಾ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಇಸಿಒಗಳಾದ ರಮಾನಂದ, ಪ್ರತಿಮಾ, ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಶಶಿಧರ್ ಕೈಕುಂಜೆ, ಎಸ್.ಡಿ.ಎಂ.ಸಿ. ಸದಸ್ಯರು, ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಲಕ್ಷ್ಮೀ ಸ್ವಾಗತಿಸಿದರು. ಶಿವಮೂರ್ತಿ ಆರ್. ವಂದಿಸಿದರು. ಶಿಕ್ಷಕಿ ಸುಶೀಲಾ ಲಿಂಗಪ್ಪ ಕಾರ್ಯಕ್ರಮ ನಿರ್ವಹಿಸಿದರು. ನಗರ ವಲಯದ 23 ತಂಡಗಳು ವಾಲಿಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿವೆ.

By Suddi9

Leave a Reply

Your email address will not be published. Required fields are marked *