ಮುಂಬಯಿ: ಗುಜರಾತ್ ಬಿಲ್ಲವರ ಸಂಘವು ಕಳೆದ ಭಾನುವಾರ ಗುಜರಾತ್ ರಾಜ್ಯದ ಬರೋಡಾ ಅಲ್ಕಾಪುರಾ ಇಲ್ಲಿನ ಸಂಘದ ಶ್ರೀ ಬೈದ್ಯಶ್ರೀ ಸಾಂಸ್ಕೃತಿಕ ಸಭಾ ಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ೧೭೨ನೇ ಜಯಂತಿಯನ್ನು ಭಜನಾ ಸಂಕೀರ್ತನೆ ಇತ್ಯಾದಿ ಧಾರ್ಮಿಕ, ಸಭಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾಪೂರ್ವಕವಾಗಿ ಸಂಭ್ರಮಿಸಿತು

ನಾರಾಯಣ ಗುರುಗಳ ಜಯಂತ್ಯೋತ್ಸವ ನಿಮಿತ್ತ ವೇದಮೂರ್ತಿ ಧನಂಜಯ ಶಾಂತಿ ಮುಂಬಯಿ ನೇತ್ರತ್ವದಲ್ಲಿ ಗುರುವಿನ ಮೂರ್ತಿಗೆ ಅಭಿಷೇಕ, ಗಾಯತ್ರೀ ಪರಿವಾರದವರಿಂದ ಗುರುಪೂಜೆ, ಮಾತ -ಪಿತೃ ಗಳ ಪಾದ ಪೂಜೆ, ಮಹಾಮಂಗಳಾರತಿ ನೆರವೇರಿತು

ಸಂಘದ ಗೌರವಾಧ್ಯಕ್ಷ ದಯಾನಂದ ಬೊಂಟ್ರ (ಬೆಳ್ಮಣ್ಣು) ಬರೋಡಾ ಇವರ ದಕ್ಷ ಮಾರ್ಗದರ್ಶನದೊಂದಿಗೆ ಜಿಬಿಎಸ್ ಅಧ್ಯಕ್ಷ ಹರೀಶ್ ವಿ.ಪೂಜಾರಿ ಮಡ್ಯಾರ್ (ದೇರಳಕಟ್ಟೆ) ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಸಮಾಜ ಅಹ್ಮದಾಬಾದ್ ಅಧ್ಯಕ್ಷ ಎಚ್ ವಿ. ಬೆನ್ನೂರ್, ಶ್ರೀ ಕ್ಷೇತ್ರ ಗೆಜ್ಜೆಗೀರಿ ಅಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶಕುಂತಲಾ ಕೋಟ್ಯಾನ್, ಶ್ರೀಕ್ಷೇತ್ರ ಗೆಜ್ಜೆಗಿರಿ ಗೌರವಾಧ್ಯಕ್ಷರುಗಳಾದ ಜಯಂತ್ ನಡುಬೈಲ್ ಮತ್ತು ಪೀತಾಂಬರ ಹೆರಾಜೆ, ಅಧ್ಯಕ್ಷ ರವಿ ಚಿಲಿಂಬಿ, ತುಳು ಸಂಘ ಬರೋಡ ಶ್ರೀಮತಿ ಪ್ರಮೀಳಾ ಶಶಿಧರ್ ಶೆಟ್ಟಿ , ಕರ್ನಾಟಕ ಸಮಾಜ, ಅಹ್ಮದಾಬಾದ್ ಉಪಾಧ್ಯಕ್ಷ ರಾಜೇಂದ್ರ ನಾಯ್ಕ್, ತುಳು ಐಸಿರಿ ವಾಪಿ ಗೌರವಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪಟ್ಲ ಫೌಂಡೇಶನ್ ಗುಜರಾತ್ ಅಧ್ಯಕ್ಷ ಅಜಿತ್ ಶೆಟ್ಟಿ, ಜಿಬಿಎಸ್ ಮುಖ್ಯ ಸಂಯೋಜಕ ವಾಸು ವಿ.ಸುವರ್ಣ, ಮಾಜಿ ಅಧ್ಯಕ್ಷರುಗಳಾದ ಮನೋಜ್ ಸಿ.ಪೂಜಾರಿ, ವಿಶ್ವನಾಥ್ ಜಿ.ಪೂಜಾರಿ ಬಾರ್ಡೋಲಿ (ಸೂರತ್), ಮನೋಜ್ ಎಂ ಪೂಜಾರಿ ಅಹ್ಮದಾಬಾದ್, ಜಿಬಿಎಸ್ ವಾಪಿ ಶಾಖೆಯ ಗೌರವಾಧ್ಯಕ್ಷ ಸದಾಶಿವ ಪೂಜಾರಿ, ಸಂಯೋಜಕ ರಮೇಶ್ ಪೂಜಾರಿ, ಜಿಎಸ್ಬಿ ಸೂರತ್ ಶಾಖೆಯ ಸಂಯೋಜಕ ಪ್ರಭಾಕರ್ ಎಸ್ ಪೂಜಾರಿ ಮಹಿಳಾಧ್ಯಕ್ಷೆ ಚಂದ್ರಿಕಾ ಅಶೋಕ್ ಕೋಟಿಯನ್, ಕಾರ್ಯದರ್ಶಿ ಸಂತೋಷ್ ಸಾಲಿಯನ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಅತಿಥಿಗಳು ಮಕ್ಕಳಿಗೆ ಶಿಕ್ಷಣ ನಿಧಿ, ವಿದ್ಯಾಥಿsವೇತನ ವಿತರಿಸಿ ಶುಭಕೋರಿದರು.

ಆರಂಭದಲ್ಲಿ ಗಣ್ಯರು ಸಂಘದ ಮಂದಿರದಲ್ಲಿನ ಮಾತೆ ಗಾಯತ್ರಿದೇವಿ, ಕೋಟಿ-ಚೆನ್ನಯರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗಳಿಗೆ ಆರತಿಗೈದರು. ವೇದ ಮೂರ್ತಿ ಧನಂಜಯ ಶಾಂತಿ ಮತ್ತು ಸಂಗಡಿಗರಿಂದ ಹರಿಕಥೆ, ಭಕ್ತ ಪ್ರಹ್ಲಾದ. ಕಾರ್ಯಕಾರಿ ಸಮಿತಿಯ ಅನೇಕ ಸದಸ್ಯರು ಉಪಸ್ಥಿತರಿದ್ದು ಸಂಘದ ಸದಸ್ಯರು, ಮಹಿಳೆಯರು, ಮಕ್ಕಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಕಿರಿಯರೆಲ್ಲಾ ಮಾತಾಪಿತರ ಪಾದಪೂಜೆ ನಡೆಸಿ ಆಶೀರ್ವಾದ ಪಡೆದು ಕೊಂಡರು

ಕು|ಶಮಿತಾ ಸೋಮನಾಥ್ ಪೂಜಾರಿ ಕು| ನಿಶ್ಮಿತಾ ನಾಗೇಶ್ ಪೂಜಾರಿ ಕು| ಭವ್ಯ ರಘು ಪೂಜಾರಿ ಬಳಗವು ಪ್ರಾರ್ಥನೆಯನ್ನಾಡಿತು. ಸೌಮ್ಯ ಪ್ರಭಾಕರ್ ಪೂಜಾರಿ ಸ್ವಾಗತಿಸಿದರು. ಸೌಮ್ಯ ಪಿ ಪೂಜಾರಿ ಪ್ರಾಸ್ತಾವಿಕ ಭಾಷಣಗೈದರು. ರೇವತಿ ರೋಹಿದಾಸ್ ಪೂಜಾರಿಯ ವಿದ್ಯಾಥಿsಗಳ ಪಟ್ಟಿ ವಾಚಿಸಿದರು. ಸರಿತಾ ಸೋಮನಾಥ್ ಪೂಜಾರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಾಗೂ ಅರುಣಾ ಸಾಲ್ಯಾನ್ ಸಭಾ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಸಾಲಿಯನ್ ಅಭಾರ ಮನ್ನಿಸಿದರು.

