ಕಳಸಗುರಿ: ನವ್ಯಜ್ಯೋತಿ ಫ್ರೆಂಡ್ಸ್ ಕ್ಲಬ್ ಉದ್ಘಾಟನೆ
ಕೈಕಂಬ: ಅಡ್ಡೂರಿನ ಕಳಸಗುರಿ ಎಂಬಲ್ಲಿರುವ ನವ್ಯಜ್ಯೋತಿ ಫ್ರೆಂಡ್ಸ್ ಕ್ಲಬ್ನ ನೂತನ ಕಟ್ಟಡ ಉದ್ಘಾಟನೆಯನ್ನು ಇಂದು ಮಧ್ಯಾಹ್ನ ಪೊಳಲಿಯ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಉದ್ಘಾಟಿಸಿ ಮಾತಾಡಿದ ಅವರು ಸಂಘಟನೆ ಹೇಗೆ ಮಾದರಿಯಾಗಿರಬೇಕು ಎಂದು ವಿವರಿಸಿದರು. ನಂತರ ನಾವೆಲ್ಲರೂ ಧರ್ಮ ಮಾರಗ್ದಲ್ಲಿ ನಡೆಯಬೇಕು. ಧರ್ಮದ ಹಾದಿಯಲ್ಲಿ ನಡೆದರೆ ಅದಕ್ಕೆ ಭಗವಂತನ ಆಶೀರ್ವಾದ ಸಿಗುತ್ತದೆ. ಯುವಕರು ಸಮಾಜಕ್ಕೆ ಮಾದರಿಯಾಗಿ ಬದುಕಿ ಎಲ್ಲರಿಗೂ ಚೈತನ್ಯ ತುಂಬುವ ಕೆಲಸ ಮಾಡಬೇಕು ಎಂದು ಹೇಳಿದರು.
ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುರುಪುರ ಗೋಳಿದಡಿಗುತ್ತು ಇದರ ಗಡಿಕಾರರಾಗಿರುವ ವರ್ಧಮಾನ್ ದುರ್ಗಾಪ್ರಸಾದ್ ಶೆಟ್ಟಿ ವಹಿಸಿದ್ದರು. ನಂತರ ಮಾತಾಡಿದ ಅವರು ನರೇಂದ್ರ ಮೋದಿಯವರಿಗೆ ದೇಶದ ಮೇಲೆ ಅತೀವ ಕಾಳಜಿ ಇದ್ದು ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಅವರನ್ನು ಇಂದಿನ ಯುವಕರು ಮಾದರಿಯಾಗಿ ತೆಗೆದುಕೊಳ್ಳಬೇಕೆಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ರವಿಶಂಕರ್ ನೂಯಿ, ಯು.ಪಿ. ಇಬ್ರಾಹಿಂ, ಉದ್ಯಮಿಗಳಾದ ನಾರಾಯಣ ಕುಲಾಲ್,ಪದ್ಮನಾಭ ಶೆಟ್ಟಿ, ಗಂಗಾಧರ ದಾಸ್,ಸಂಘದ ಅಧ್ಯಕ್ಷ ರುಕ್ಮಯ ಸಪಲಿಗ ಮತ್ತಿತರು ಉಪಸ್ಥಿತರಿದ್ದರು. ಇದೇ ವೇಳೆ ನಿವೃತ ಶಿಕ್ಷಕ ಪೊಳಲಿ ವಿಷ್ಣುಮೂರ್ತಿ ರಾವ್ ಅವರನ್ನು ಸನ್ಮಾನಿಸಲಾಯಿತು. ಮತ್ತು ನಾಲ್ಕು ಶಾಲಾ ಪ್ರಥಮ ಮತ್ತು ದ್ವಿತಿಯ ವಿಧ್ಯಾರ್ಥಿವೇತನ ನಗದು ನೀಡಲಾಯಿತು. ನವೀನ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ಸ್ವಾಗತಿಸಿ ದೀಕ್ಷಿತ್ ಧನ್ಯವಾದವಿತ್ತರು


















