ಬಂಟ್ಚಾಳ:  ಪತ್ತೂರು ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆದ  ವಿದ್ಯಾಭಾರತಿ ಕರ್ನಾಟಕ, ದ.ಕ ಜಿಲ್ಲಾ ಮಟ್ಟದ ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವದಲ್ಲಿ  ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಗಣಿತ ಮಾದರಿ ಪ್ರದರ್ಶನದಲ್ಲಿ ಸಮ ಬಹುಭುಜಾಕೃತಿ ಗುಣ ಧರ್ಮಗಳ ಮೇಲೆ ಆಧಾರಿತ ಪ್ರದರ್ಶನ ಎಂಬ ವಿಷಯದಲ್ಲಿ  ೬ನೇ ತರಗತಿಯ ನಿಹಾರಿಕ ಪ್ರಥಮ ಸ್ಥಾನ, ಸ್ವಚ್ಛ ಭಾರತ ಆಭಿಯಾನ ಮತ್ತು ತ್ಯಾಜ್ಯ ನಿರ್ವಹಣೆ ಆಧಾರಿತ ಮಾದರಿಯಲ್ಲಿ ೭ನೇ ತರಗತಿಯ ಸುಧನ್ವ ಕಾಮತ್  ಪ್ರಥಮ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಗಣಿತ ಮಾದರಿ ಪ್ರದರ್ಶನದಲ್ಲಿ ಸರ್ವಸಮೀಕಾ ಆಧಾರಿತ ಎಂಬ ವಿಷಯದಲ್ಲಿ ೭ನೇ ತರಗತಿಯ ಅನ್ವೇಷ್ ಪ್ರಭು ದ್ವಿತೀಯ, ಸೃಜನಾತ್ಮಕ ಗಣಿತ ಮಾದರಿ ಎಂಬ ವಿಷಯದಲ್ಲಿ ೭ನೇ ತರಗತಿಯ ಹರ್ಷಿತಾ ದ್ವಿತೀಯ , ಘರ್ಷಣೆ ಆಧಾರಿತ ಮಾದರಿಯಲ್ಲಿ ೬ನೇ ತರಗತಿಯ ವಿಖ್ಯಾತ್ ದ್ವಿತೀಯ, ಸಂಸ್ಕೃತಿ ಜ್ಞಾನ ರಸಪ್ರಶ್ನೆಯಲ್ಲಿ  ೭ನೇ ತರಗತಿಯ ಸ್ಕಂದತೇಜ ಮತ್ತು  ಭೂಮಿಕ , ೬ನೇ ತರಗತಿಯ ಶ್ರಾವಣಿ ದೀಪ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಇವರಿಗೆ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ ಹಾಗೂ ಅಧ್ಯಾಪಕೇತರರು ಅಭಿನಂದಿಸಿದ್ದಾರೆ.

By Suddi9

Leave a Reply

Your email address will not be published. Required fields are marked *