ಕೈಕಂಬ: ಪೇಜಾವರ ಕೆಂಜಾರ್ ಗಾಂದೊಟ್ಯ ಕುಕ್ಯಾನ್ ಕುಟುಂಬಿಕರ ನಾಗ ಬಣದಲ್ಲಿ ಸೀತಾರಾಮ ಶಾಂತಿ ನೇತೃತ್ವದಲ್ಲಿ ನಾಗರಪಂಚಮಿಯಂದು ನಾಗತಂಬಿಲ ನಡೆಯಿತು.

ಕುಕ್ಯಾನ್‌ ಮೂಲಸ್ಥಾನದ ಧೂಮಾವತಿ ಬಂಟ ಹಾಗೂ ಪರಿವಾರ ದೈವಗಳ ಧರ್ಮಚಾವಡಿಯಲ್ಲಿ ದೈವಗಳಿಗೆ ಪರ್ವ ನಡೆದು ನಾಗದೇವರಿಗೆ ಹಾಲಾಭಿಷೇಕ, ಸೀಯಾಳಾಭಿಷೇಕ ನಡೆದು ನಾಗದೇವರಿಗೆ ಅಳಂಕರಿಸಿ, ಕುಕ್ಯಾನ್ ಕುಟುಂಬಿಕರಿಂದ ನಾಗರಪಂಚಮಿಯಂದು ಸುಮಾರು 800 ತನು ತಂಬಿಲ ಸೇವೆ ನಡೆಯಿತು.

ಗಾಂದೊಟ್ಯ ಕುಕ್ಯಾನ್‌ ಕುಟುಂಬಿಕರ ಅಧ್ಯಕ್ಷ ಪದ್ಮನಾಭ ಪೂಜಾರಿ ,ಗೌರವಾಧಶ್ಯಕ್ಷ ದೊಡ್ಡಯ್ಯ ಪೂಜಾರಿ ಕಾರ್ಯದರ್ಶಿ ತಾರಾನಾಥ್ ಪೂಜಾರಿ, ಶ್ರೀಧರ ಪೂಜಾರಿ, ಮೋಹನ್ ಪೂಜಾರಿ, ನವೀನ್ ಪೂಜಾರಿ, ರಮೇಶ್ ಪೂಜಾರಿ ಹಾಗೂ ಕುಕ್ಯಾನ್ ಕುಟುಂಬಿಕರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

By Suddi9

Leave a Reply

Your email address will not be published. Required fields are marked *