ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.)ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ ಇದರ  ಬಂಟ್ವಾಳ ವಲಯದ 27 ನೇ ವಾರ್ಷಿಕ ಸಭೆಯು  ಬಿ.ಸಿ.ರೋಡ್ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ವಲಯಧ್ಯಕ್ಷರಾದ ರಾಜೇಂದ್ರ ಕೆ.  ಸಭೆಯ ಅಧ್ಯಕ್ಷತೆ ವಹಿಸಿದ್ದರು.ಎಸ್ ಕೆ ಪಿ ಎ ಜಿಲ್ಲಾಧ್ಯಕ್ಷರಾದ  ನವೀನ್ ರೈ ಪಂಜಳ ಉದ್ಘಾಟಿಸಿ ಶುಭಹಾರೈಸಿದರಲ್ಲದೆ ಜಾರಿಗೆ ತರಲಾದ ಸಾಂತ್ವನ ( ವಿಮೆ ) ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ  ಪ್ರಧಾನ ಕಾರ್ಯದರ್ಶಿ ಅಜಯ್ ಕುಮಾರ್,ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ರಾದ ಆನಂದ್  ಏನ್, ಜಿಲ್ಲಾ ಉಪಾಧ್ಯಕ್ಷರಾದ ದೇವರಾಜ್ ಶೆಟ್ಟಿ, ಜಿಲ್ಲಾ ಕ್ರೀಡಾಕಾರ್ಯದರ್ಶಿ ಹರೀಶ್ ಕುಂದರ್, ಎಸ್ ಕೆ ಪಿ ವಿವಿದೊದ್ದೇಶ ಸಹಕಾರ ಸಂಘದ ಉಪಾಧ್ಯಕ್ಷರಾದ ಟಿ ಹರೀಶ್  ರಾವ್ ಉಪಸ್ಥಿತರಿದ್ದರು.
ವಲಯದ ಪ್ರದಾನ ಕಾರ್ಯದರ್ಶಿ  ರವಿ ಕಲ್ಪನೆ ವಾರ್ಷಿಕ ವರದಿಯನ್ನು, ಕೋಶಾಧಿಕಾರಿ ಕೃಷ್ಣ ರಾಜ್ ರಾವ್  ಲೆಕ್ಕಪತ್ರ ಮಂಡಿಸಿದರು. ಇದೇ ವೇಳೆ  ಪಿ ಯು ಸಿ ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ  ಅತೀ ಹೆಚ್ಚು ಅಂಕ ಗಳಿಸಿದ ವಲಯದ ಸದಸ್ಯ ರ ಮಕ್ಕಳಿಗೆ  ವಿದ್ಯಾನಿಧಿಯನ್ನು ವಿತರಿಸಲಾಯಿತು.
ವಲಯದ ಗೌರವಧ್ಯಕ್ಷರಾದ ಕಿಶೋರ್ ಕುಮಾರ್ ಸ್ವಾಗತಿಸಿದರು, ರೋಷನ್ ಕಲ್ಲಡ್ಕ ವಂದಿಸಿದರು. ದಯಾನಂದ್ ಬಂಟ್ವಾಳ   ನಿರೂಪಿಸಿದರು

By Suddi9

Leave a Reply

Your email address will not be published. Required fields are marked *