ಬಂಟ್ವಾಳ :ಇಲ್ಲಿನ ಭಂಡಾರಿಬೆಟ್ಟು ಶ್ರೀ ಕೃಷ್ಣ ಮಂದಿರ ಸೇವಾ ಟ್ರಸ್ಟ್ (ರಿ.), ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಸಮಿತಿ, ಶ್ರೀ ಕೃಷ್ಣ ಮಾತೃ ಬಳಗಗಳ ಆಶ್ರಯದಲ್ಲಿ ನಡೆಯುವ 75 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಟ್ರಸ್ಟ್ ನ ಅಧ್ಯಕ್ಷ ನಾರಾಯಣ ಮೂಲ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಮುಖರಾದ ರೋ. ಕಿಶೋರ್ ಕುಮಾರ್, ಸ್ವಣೋದ್ಯಮಿಗಳಾದ ಸುನೀಲ್ ಬಿ, ಯುವರಾಜ್ ಆಚಾರ್ಯ, ಮಾಜಿ ಪುರಸಭಾ ಸದಸ್ಯ ಬಿ ಜಗದೀಶ್ ಕುಂದರ್, ಹಿರಿಯರಾದ ಕೊಗ್ಗಣ್ಣ ಆಚಾರ್, ಚಂದ್ರಶೇಖರ ಶೆಟ್ಟಿ ಕನ್ನಡಿಗುತ್ತು ಉಪಸ್ಥಿತರಿದ್ದು, ಶುಭ ಹಾರೈಸಿದರು.
ಸಮಿತಿಯ ಅಧ್ಯಕ್ಷ ದಯಾನಂದ ಗೌಡ, ಮಾತೃ ಬಳಗದ ಪ್ರ.ಕಾರ್ಯದರ್ಶಿ ಶೋಭಾ ಲಕ್ಷ್ಮಣ, ಹಿರಿಯರಾದ ಪುರಂದರ ಆಚಾರ್ಯ, ರಾಜೇಶ್ ಗೌಡ ಮುರಳಿಧರ ಆಚಾರ್, ಸ್ಥಳೀಯ ಸಂಘ ಸಂಸ್ಥೆ ಪ್ರಮುಖರಾದ ಭಾಸ್ಕರ್ ಟೈಲರ್ ಕಾಮಾಜೆ, ಬಾಲಕೃಷ್ಣ ಕಲಾಯಿ, ಜಯಪ್ರಕಾಶ್, ಅನಿಲ್ ಮಂಡಾಡಿ, ವಿನೀತ್ ಮಯ್ಯರಬೈಲು, ಸಮಿತಿಯ ಹರೀಶ್ ಬಿ, ಜಯ ಕುಲಾಲ್, ಲಕ್ಷ್ಮಣ, ರಘುನಾಥ ಸಾಲ್ಯಾನ್, ಸತೀಶ ಗೌಡ ಮಿದಲಾದವರು ಉಪಸ್ಥಿತರಿದ್ದರು. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಭಂಡಾರಿಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.
75ನೇ ಮೊಸರು ಕುಡಿಕೆ ಉತ್ಸವವು ಸೆ. 04ರಿಂದ 06 ರ ವರೆಗೆ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ,ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
