ಬಂಟ್ಚಾಳ: ರಾಜ್ಯದೆಲ್ಲೆಡೇ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿನ ಕೆಲವೊಂದು ಪ್ರದೇಶಗಳಲ್ಲಿ ಯುವಜನರು ಮತ್ತು ವಿದ್ಯಾರ್ಥಿಗಳಲ್ಲಿ ಡ್ರಗ್, ಗಾಂಜಾ ಸಹಿತ ಮಾದಕ ಸೇವನೆಯು ಅತಿಯಾಗುತ್ತಿದ್ದು,ಇದಕ್ಕೆ ಕಡಿವಾಣ ಹಾಕುವ ಭಾಗವಾಗಿ ಪೊಲೀಸ್ ಇಲಾಖೆ ವಿದ್ಯಾರ್ಥಿಗಳಿಗೆ ಡ್ರಗ್ ಪರೀಕ್ಷೆಗೊಳಪಡಿಸಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಂಟ್ವಾಳ ತಾ.ಪಂ. ಮಾಜಿ ಸದಸ್ಯ ಪ್ರಭಾಕರ ಪ್ರಭು ತಿಳಿಸಿದ್ದಾರೆ.

ಇತ್ತೀಚಿಗಿನ ದಿನಗಳಲ್ಲಿ ಸಮಾಜಸೇವೆಯ ಸೋಗಿನಲ್ಲಿ ಆಂಬುಲೆನ್ಸ್ ವಾಹನದಲ್ಲಿಯೂ ಮಾದಕ ಸೇವನೆಯ ಐಟಂಗಳು ಸಾಗಾಟವಾಗುತ್ತಿರುವುದು ಅಘಾತಕಾರಿ ಸಂಹತಿಯಾಗಿ ಎಂದು ಪ್ರಕಟಣೆಯಲ್ಲಿತಿಳಿಸಿರುವ ಅವರು ಡ್ರಗ್ ಮಾಪಿಯಾವನ್ನು ತಡೆಗಟ್ಟುವಿಕೆಯೇ ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ ಎಂದು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಂಗಳೂರು ನಗರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿಯು ಡ್ರಗ್, ಗಾಂಜಾ ಘಾಟು ಹೆಚ್ಚಾಗುತ್ತಿದ್ದು,ಸಾರ್ವಜನಿಕರಲ್
