ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯಕ್ಕೆ ಹೈಕೋಟ್೯ ವಕೀಲರು ಸಹಿತ ಹಲವಾರು ಗಣ್ಯರು ಭೇಟಿ ನೀಡಿ ವಿದ್ಯಾರ್ಥಿಗಳ ಚಟುವಟಿಕೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು ಹೈಕೋಟ್೯ ವಕೀಲರುಗಳಾದ ಸಿದ್ಧಾರ್ಥ್,ವ್ಯಾಸ್ ಕಿರಣ್ ಉಪಾಧ್ಯ, ಉದ್ಯಮಿಗಳಾದ ಗಿರೀಶ್, ಪ್ರತಾಪ್ ,ಸಾಮಾಜಿಕ ಕಾರ್ಯಕರ್ತರಾದ ರಮೇಶ್ ಕಾಸರಗೋಡು, ಕೋಲಾರ ವಿಭಾಗದ ಪ್ರಚಾರಕರಾದ ಪ್ರಶಾಂತ್ ಪಳ್ಳಮಜಲು ಮೊದಲಾದವರು ಭೇಟಿ ನೀಡಿದ್ದರು.

ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ ಪ್ರಭಾಕರ ಭಟ್ ಕಲ್ಲಡ್ಕ ಅವರು ವಿದ್ಯಾಕೇಂದ್ರ ಬೆಳೆದು ಬಂದ ದಾರಿ,ವಿದ್ಯಾರ್ಥಿಗಳ ಚಟುವಟಿಕೆ ಸಹಿತ ಸಮಗ್ರ ಮಾಹಿತಿಯನ್ನು ಗಣ್ಯರಿಗೆ ವಿವರಿಸಿದರು.
ಅತಿಥಿಗಳು ವಿದ್ಯಾಲಯದ ಸರಸ್ವತಿ ವಂದನಾ ಕಾರ್ಯಕ್ರಮವನ್ನು ವೀಕ್ಷಿಸಿದರು . ಈ ಸಂದರ್ಭದಲ್ಲಿ ಮಾತನಾಡಿದ ಹೈಕೋಟ್೯ ವಕೀಲರಾದ ಸಿದ್ದಾರ್ಥ್ ಶ್ರೀರಾಮ ವಿದ್ಯಾ ಕೇಂದ್ರವು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿ, ಮೌಲ್ಯಗಳು, ಶಿಸ್ತು, ದೇಶಭಕ್ತಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ಸಮಾಜಸೇವೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕಲ್ಲದೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಉಪನ್ಯಾಸಕಿಯಾದ ಶ್ರೀಮತಿ ಚೈತನ್ಯ ಕಾರ್ಯಕ್ರಮವನ್ನು ನಿರ್ವಹಿಸಿದರು.
