ಬಂಟ್ವಾಳ:ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ಭಾಮತೀ ವಾಣಿಜ್ಯ ಸಂಘದ ವತಿಯಿಂದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಸಂಬಂಧಿಸಿದ ಕೋಚಿಂಗ್ ತರಗತಿಗೆ‌ ಚಾಲನೆ ನೀಡಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ  ಐಆರ್‌ಎಂಸಿಡಿ ಸಂಸ್ಥೆಯ ಕಾರ್ಯ ನಿರ್ವಾಹಣಾಧಿಕಾರಿ  ಆಗಿರುವ  ಪ್ರಫುಲ್ಲಾ ಗಣೇಶ್  ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕೋಚಿಂಗ್ ತರಗತಿಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಐಆರ್‌ಎಂಸಿಡಿ ಸಂಸ್ಥೆಯ ತರಬೇತುದಾರರಾದ ಕುಮಾರಿ ಭವ್ಯ, ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲರಾದ  ವಸಂತ್ ಬಲ್ಲಾಳ್, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ  ದಿನೇಶ್ ಹಾಗೂ ಐಆರ್‌ಎಂಸಿಡಿ ಸಂಸ್ಥೆಯ ಮುಖ್ಯಸ್ಥರಾದ  ಗಣೇಶ್ ಉಪಸ್ಥಿತರಿದ್ದರು. ಭಾಮತೀ ವಾಣಿಜ್ಯ ಸಂಘದ ನಿರ್ದೇಶಕಿ  ಶೋಭಾ  ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *