ವಿಟ್ಲ:ಬಾಲಗೋಕುಲ ಸಮಿತಿ ವಿಟ್ಲ ಇದರ ಆಶ್ರಯದಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ಸದನದಲ್ಲಿ ಬಾಲಗೋಕುಲ ತರಗತಿ ಪ್ರಾರಂಭಗೊಂಡಿತು. ಉದ್ಘಾಟನೆಯನ್ನು ವರಮಹಾಲಕ್ಷ್ಮಿ ಪೂಜಾ ಸಮಿತಿಯ ಕಾರ್ಯದರ್ಶಿಯಾಗಿರುವ ರಶ್ಮಿ ಹರೀಶ್ ಇವರು ದೀಪ ಪ್ರಜ್ವಲನೆಯ ಮೂಲಕ ನೆರವೇರಿಸಿದರು.

ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ರಾಧಾಕೃಷ್ಣ ಕೂಡೂರು ವಹಿಸಿದ್ದರು. ಬಾಲಗೋಕುಲ ತರಗತಿಯನ್ನು ಮೈತ್ರೇಯಿ ಗುರುಕುಲದ ಭಗಿನಿಯರು ನಡೆಸಿ ಕೊಟ್ಟರು. ನಿಶ್ಮಿತ ಇವರು ಕಾರ್ಯಕ್ರಮವನ್ನು ಸಂಯೋಜಿಸಿದರು. ಮೋಹನ ಕಟ್ಟೆ, ನಾಗೇಶ್ ಆಚಾರ್ಯ, ಸವಿತಾ ಜತ್ತಪ್ಪ ಗೌಡ, ಸುದಶ೯ನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
