ಮುಂಬಯಿ: ರೈಲು ಪ್ರಯಾಣಿಕರ ಬೇಡಿಕೆಯನ್ನು ಮನ್ನಿಸಿದ ಪಶ್ಚಿಮ ರೈಲ್ವೆಯು ವಲ್ಸಾಡ್ – ವೆಲಂಕಣಿ ಮಧ್ಯೆ ವಿಶೇಷ ರೈಲು ಸಂಚಾರ ಆರಂಭಿಸಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಪಶ್ಚಿಮ ರೈಲ್ವೆಯು ಯಾತ್ರಿಗಳ ಬೇಡಿಕೆಗೆ ಅನುಗುಣವಾಗಿ `ಟ್ರೈನ್ ಆನ್ ಡಿಮ್ಯಾಂಡ್’ ವಿಶೇಷ ವಲ್ಸಾಡ್ – ವೆಲಂಕಣಿ ರೈಲು ಸಂಚಾರ ಎರಡು ಟ್ರಿಪ್‌ಗಳ ಸಂಚಾರವನ್ನು ಘೋಷಿಸಿದೆ.

 

ಗುಜರಾತ್‌ನ ವಲ್ಸಾಡ್ ಮತ್ತು ತಮಿಳುನಾಡು ಅಲ್ಲಿನ ಪ್ರಸಿದ್ಧ ತೀರ್ಥಕ್ಷೇತ್ರ ವೆಲಂಕಣಿ ನಡುವೆ ವಿಶೇಷ ದರದಲ್ಲಿ ವೆಲಂಕಣಿ ವಿಶೇಷ ರೈಲುಗಳನ್ನಾಗಿಸಿ ರೈಲು ಸಂಚಾರ ಆರಂಭ ನಡೆಸಿದೆ. ರೈಲ್ವೆ ಮಂಡಳಿಯ ಅನುಮೋದನೆಯ ಮೇರೆಗೆ ಕೆಳಗಿನ ತಿಳಿಸಿದ ವೇಳಾಪಟ್ಟಿಯಂತೆ ರೈಲುಗಳು ಸಂಚರಿಸಲಿವೆ. ರೈಲು ಸಂಖ್ಯೆ ೦೯೦೩೦ ವಲ್ಸಾಡ್ -ವೆಲಂಕಣಿ ವಿಶೇಷ ರೈಲು ದಿನಾಂಕ ೦೩.೦೭.೨೦೨೬ರ ಶುಕ್ರವಾರ ಸಂಜೆ ೦೬:೨೫ ಗಂಟೆಗೆ ವಲ್ಸಾಡ್‌ನಿಂದ ಹೊರಡಲಿದ್ದು ಮಾರನೆ ದಿನ (ಜು.೦೪) ಶನಿವಾರ ಬೆಳಗ್ಗೆ ೧೦:೦೦ ಗಂಟೆಗೆ ವೆಲಂಕಣಿ ತಲುಪಲಿದೆ.

ರೈಲು ಸಂಖ್ಯೆ ೦೯೦೨೯ (ವೆಲಂಕಣಿ- ಡಹಾಣು ರೋಡ್ ವಿಶೇಷ ರೈಲು) ದಿನಾಂಕ ೦೬.೦೭.೨೦೨೬ರ (ಭಾನುವಾರ ತಡರಾತ್ರಿ) ಅಂದರೆ ಸೋಮವಾರ ಮಧ್ಯರಾತ್ರಿ ೦೦:೩೦ ಗಂಟೆಗೆ ವೆಲಂಕಣಿಯಿಂದ ಹೊರಡಲಿದ್ದು, ದಿನಾಂಕ ೦೭.೦೭.೨೦೨೬ ರಂದು ಬೆಳಗ್ಗೆ ೧೦:೩೦ ಗಂಟೆಗೆ ಡಹಾಣು ರೋಡ್ ತಲುಪಲಿದೆ. ಈ ವಿಶೇಷ ರೈಲು ಐಸಿಎಫ್ ಮಾದರಿಯ ಒಟ್ಟು ೨೨ ಬೋಗಿಗಳನ್ನು ಹೊಂದಿರಲಿದ್ದು, ಇದರಲ್ಲಿ ೨೦ ಸ್ಲೀಪರ್ ಕ್ಲಾಸ್ (ಎಸ್‌ಸಿಎನ್) ಬೋಗಿಗಳು ಹಾಗೂ ೨ ಎಸ್‌ಎಲ್‌ಆರ್/ ಡಿ ಬೋಗಿಗಳು ಇರಲಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ರೈಲುಗಳ ವಿವರಗಳನ್ನು ಐಸಿಎಂಎಸ್ ಮತ್ತು ಎನ್‌ಟಿಇಎಸ್ ವ್ಯವಸ್ಥೆಗಳಲ್ಲಿ ಅಪ್‌ಡೇಟ್ ಮಾಡಲಾಗಿದೆ.

By Suddi9

Leave a Reply

Your email address will not be published. Required fields are marked *