ಶಿವಾ ಸರ್ವಸಂಪನ್ನ ಸದ್ಗುಣವಂತ ಹೃದಯಶೀಲರು : ಮಧುರ್ ಭಂಡಾರ್ಕರ್

ಮುಂಬಯಿ: ಶಿವಾ ನನ್ನ ಸಹೋದರನೂ ಹೌದು, ಪರಮಮಿತ್ರರೂ ಸರಿ. ಕಳೆದ ಸುಮಾರು ಮೂರು ದಶಕಗಳ ಮಿತ್ರತ್ವ ನಮ್ಮ ಸಂಬಂಧವನ್ನು ಪುಷ್ಟೀಕರಿಸಿದೆ. ನಮ್ಮಿಬ್ಬರ ಜೀವನಶೈಲಿ ಸಮಾನತೆಯಿಂದ ಕೂಡಿದ್ದು ನಮ್ಮ ಬಾಂಧವ್ಯತ್ವಕ್ಕೆ ಇದೇ ಕಾರಣೀಭೂತವಾಗಿದೆ. ಸರ್ವ ಸಂಪನ್ನ ಸದ್ಗುಣವಂತ ಹೃದಯಶೀಲರಾಗಿದ್ದು, ಕಠಿಣ ಪರಿಶ್ರಮಿ ಆಗಿರುವ ಸರಳ ಸಜ್ಜನಿಕಾ ವ್ಯಕ್ತಿತ್ವದ ಶ್ರೇಷ್ಠರು. ತೀರಾ ತಳಮಟ್ಟದಿಂದ ಬೆಳೆದುಬಂದಿರುವ ಶಿವಾ ಓರ್ವ ಅನುದಿನದ ಪರಿಶ್ರಮಿಯಾಗಿ ವೃತ್ತಿನಿಷ್ಠೆಯುಳ್ಳವರಾಗಿದ್ದಾರೆ. ಅವುಗಳೆಲ್ಲವುದರ ಫಲಿತಾಂಶವೇ ಈ ಸಂಭ್ರಮವಾಗಿದೆ ಎಂದ ಬಾಲಿವುಡ್ ಚಿತ್ರರಂಗದ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಪದ್ಮಶ್ರೀ ಮಧುರ್ ಭಂಡಾರ್ಕರ್ ತಿಳಿಸಿದರು

 

ಬೃಹನ್ಮುಯಿಯಲ್ಲಿ ಹೇರ್ ಸ್ಟೈಲೋ ಮೂಲಕ ಸೆಲೆಬ್ರಟಿ ವ್ಯಕ್ತಿಯಾಗಿ ಪ್ರತಿಷ್ಠೆಗೆ ಪಾತರರಾದ ತುಳು-ಕನ್ನಡಿಗ ಡಾ| ಶಿವರಾಮ ಕೆ.ಭಂಡಾರಿ ಆಡಳಿತ್ವದ ಪ್ರಸಿದ್ಧ ಕೇಶ ವಿನ್ಯಾಸ ಸಂಸ್ಥೆ ಶಿವಾ’ಸ್ ಹೇರ್ ಡಿಝೈನರ್‍ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಕಳೆದ ಸೋಮವಾರ ಸಂಜೆ ಅಂಧೇರಿ ಪೂರ್ವದ ಪೆನಿನ್ಸೂಲಾ ಗ್ರ್ಯಾಂಡ್ ಹೊಟೇಲ್ ಸಭಾಗೃಹದಲ್ಲಿ ಆಚರಿಸಿದ ೩೮ನೇ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ಶಿವಾ’ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾರಿತೋಷಕಗಳನ್ನು ಪ್ರದಾನಿಸಿ, ಶಿವಾ’ಸ್ ಸಂಸ್ಥೆಯ ನೂತನ ವೆಬ್‌ಸೈಟ್ ಅನಾವರಣ ಗೊಳಿಸಿ, ವಿನೂತನ ಸೇವಾ ಸದಸ್ಯತ್ವದ ಶಿವಾ’ಸ್ ಸಫಾಯರ್ ಕಾರ್ಡ್ ಬಿಡುಗಡೆಗೊಳಿಸಿ ಭಂಡಾರ್ಕರ್ ನುಡಿದರು.

 

ಕಾರ್ಯಕ್ರಮದದಲ್ಲಿ ಗೌರವ ಅತಿಥಿಯಾಗಿ ಮಿಸ್ ಇಂಡಿಯಾ ಇಂಟರ್‌ನ್ಯಾಶನಲ್ ಪುರಸ್ಕೃತೆ, ನಟಿ ಆಯೀಷಾ ಎಸ್.ಐಮಾನ್, ಗೌರವ್ವಾನಿತ ಆಹ್ವಾನಿತರಾಗಿ ಮನಿಫೋಲ್ಡ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‌ನ ಕಾರ್ಯಾಧ್ಯಕ್ಷ, ಮಹಾ ಮಂಡಲ ಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ, ಮಾಜಿ ಸಂಸದ ರಾಹುಲ್ ಶೆವಾಲೆ, ಉದ್ಯಮಿಗಳಾದ ಪ್ರಕಾಶ್ ಶೆಟ್ಟಿ, ರಾಜೇಶ್ ಶೆಟ್ಟಿ, ಜಿತೇಂದ್ರ ಕೋಂಡೆ, ಅಶೋಕ್ ಧಮಣ್ಕರ್, ಅರವಿಂದ್ ಜೈನ್, ನರೇಂದ್ರ ಗುಪ್ತಾ, ರಾಜೀವ್ ಚೌಧುರಿ, ಅಶೋಕ್ ಮುನ್ಸಿ, ಅನಘ ತೊಂಡಳ್ಕಾರ್, ಡಾ| ಗಿರಿರಾಜ್ ಪರಶರ್, ಗೋಪಾಲ್ ಶೆಟ್ಟಿ, ಭರತ್ ಶ್ಹಾ ಮತ್ತಿತರರು ಉಪಸ್ಥಿತರಿದ್ದು ಶುಭ ಕೋರಿದರು.

ಶಿವಾ’ಸ್ ಆಡಳಿತ ನಿರ್ದೇಶಕ ಡಾ| ಶಿವರಾಮ ಕೆ.ಭಂಡಾರಿ ಪ್ರಸ್ತಾವನೆಗೈದು ಶಿವಾ’ಸ್ ಸಂಸ್ಥೆಯ ೩೮ನೇ ಸಂಭ್ರಮ ನಮ್ಮ ಕುಲವೃತ್ತಿಯ ಶ್ರೇಷ್ಠತೆಯ ಪರಂಪರೆ ಎಂದೆಣಿಸಿದ್ದೇನೆ.  ಅವಿರತ ಶ್ರಮದ ನಮ್ಮ ಸೇವಾ ಪ್ರಯಾಣದ ಸಂಭ್ರಮ ಸಂಸ್ಥೆಯ ಮುನ್ನಡೆಗೆ ಪೂರಕವಾಗಿದೆ. ಸೇವಾವೃಂದದ ಗುರುತಿಸುವಿಕೆ ಮತ್ತು ನೀಡಲ್ಪಡುವ ಪ್ರತಿಫಲ ನಮ್ಮ ಭವಿಷ್ಯಕ್ಕೆ ಸ್ಫೂರ್ತಿಯಾಗಿದೆ. ಈ ಸ್ಮರಣೀಯ ಸಂಜೆ ಕೇವಲ ಸಂಭ್ರಮಾಚರಣೆ ಅಷ್ಟೇ ಅಲ್ಲದೆ, ಸಂಸ್ಥೆಯ ಈ ಅಭೂತಪೂರ್ವ ಯಶಸ್ಸು ಎಲ್ಲರಿಗೂ ಸಲ್ಲುವ ಅಭ್ಯುದಯವಾಗಿದೆ. “ನಮ್ಮ ಹಳೇ ನೆನಪುಗಳಿಗೆ ಗೌರವ, ಪ್ರಸ್ತುತ ಸಾಧನೆಗೆ ಪುರಸ್ಕಾರ ಹಾಗೂ ಭವಿಷ್ಯತ್ತಿಗೆ ಭರವಸೆಯ ಮುನ್ನುಡಿ” ಎಂಬ ಆಶಯದೊಂದಿಗೆ ಈ ಭವ್ಯ ಸಮಾರಂಭವನ್ನು ಆಯೋಜಿಸಲಾಗಿದೆ. ಕಳೆದ ೩೮ ಗಮನಾರ್ಹ ವರ್ಷಗಳಿಂದ ಸಂಸ್ಥೆಯು ತನ್ನದೇ ಆದ ಸಮರ್ಪಣಾ ಮನೋಭಾವ, ನಾವೀನ್ಯತೆ ಹಾಗೂ ಅಪ್ರತಿಮ ಯಶಸ್ಸಿನ ಇತಿಹಾಸವನ್ನು ನಿರ್ಮಿಸಿದೆ. ಈ ಸುದೀರ್ಘ ಯಾತರೆಯಲ್ಲಿ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಹಾಗೂ ಯಶಸ್ಸಿಗೆ ಕಾರಣರಾದ ಸಂಸ್ಥೆಯ ನಕ್ಷತ್ರಗಳಂತಿರುವ ಸಾಧಕರನ್ನು ಗುರುತಿಸಿ, ಗೌರವಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

 

ಕುಲದೇವರಾದ ಶ್ರೀ ಕಚ್ಚೂರು ನಾಗೇಶ್ವರ ದೇವರಿಗೆ ಸ್ತುತಿಸಿ ಶಿವಾ’ಸ್ ಪ್ರೇರಕರಾದ ಸ್ವರ್ಗೀಯ ಗುಲಾಬಿ ಕೆ.ಭಂಡಾರಿ ಅವರನ್ನು ಸ್ಮರಿಸಿ ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಚಾಲನೆಯನ್ನೀಡಲಾಯಿತು. ತನ್ನ ಸೇವಾ ಮುನ್ನಡೆಗೆ ಸ್ಪಂದಿಸಿ ಸಹಕರಿಸಿದ ಎಲ್ಲಾ ಗ್ರಾಹಕರು, ಹಿತೈಷಿಗಳನ್ನು ಡಾ|  ಶಿವರಾಮ ಕೆ.ಭಂಡಾರಿ ದಂಪತಿ ಗೌರವಿಸಿ ಅಭಿವಂದಿಸಿದರು.

 

ಶಿವಾ’ಸ್ ಪರಿವಾರದ ಅನುಶ್ರೀ ಶಿವರಾಮ್ ಭಂಡಾರಿ, ಮಾ| ರೋಹಿಲ್ ಭಂಡಾರಿ (ಸುಪುತ್ರ), ಕು| ಆರಾಧ್ಯ ಭಂಡಾರಿ (ಸುಪುತ್ರಿ), ರಾಘವ ವಿ.ಭಂಡಾರಿ, ಶ್ವೇತಾ ಆರ್.ಭಂಡಾರಿ, ರವಿ ಭಂಡಾರಿ, ಮೆಲಿಸ್ಸಾ ಡಿಕೋಸ್ತಾ, ರಾಕೇಶ್ ಭಂಡಾರಿ, ಸೋಮಶೇಖರ್ ಎಸ್.ಭಂಡಾರಿ, ನಿರಂಜನ ಭಂಡಾರಿ ಮತ್ತಿತರರು ಉಪಸ್ಥಿತರಿದ್ದು ಶಿವಾ’ಸ್ ವಿವಿಧ ಶಾಖೆಗಳ ಕರ್ಮಚಾರಿಗಳು ಮನಾಕರ್ಷಕ ನೃತ್ಯಗಳನ್ನು ಪ್ರಸ್ತುತ ಪಡಿಸಿದರು. ಸಂಸ್ಥೆಯ ಸಿಇಒ ಡಾ| ವಿನೋದ್ ಚೋಫ್ರ್ರಾ ಸ್ವಾಗತಿಸಿ, ಪ್ರಸ್ತಾವನೆಗೈದರು. ಆಫಿ ಕಾರ್ಯಕ್ರಮ ನಿರ್ವಾಹಿಸಿ  ಧನ್ಯವದಿಸಿದರು.

By Suddi9

Leave a Reply

Your email address will not be published. Required fields are marked *