ಬಂಟ್ವಾಳ:  ಗೋಳ್ತಮಜಲ್ ಗ್ರಾಮ ಪಂಚಾಯತ್, ಹಸಿರು ದಳ ಮಂಗಳೂರು, ಆಶಿರ್ವಾದ ಸಂಜೀವಿನಿ  ಒಕ್ಕೂಟ   ವತಿಯಿಂದ  ಜೆಮ್  ಪಬ್ಲಿಕ್ ಸ್ಕೂಲ್‌ನಲ್ಲಿ  ಋತುಚಕ್ರ ಹಾಗೂ ಡೈಪರ್ ಕುರಿತು ಅರಿವು ಕಾರ್ಯಾಗಾರವನ್ನು ನಡೆಸಲಾಯಿತು.

ಕಾರ್ಯಾಗಾರದಲ್ಲಿ ಸ್ಯಾನಿಟರಿ ಪ್ಯಾಡ್‌ಗಳ ದುಷ್ಪರಿಣಾಮಗಳು, ಅವುಗಳಿಗೆ ಪರ್ಯಾಯವಾಗಿ ಬಳಸಬಹುದಾದ ಸುಸ್ಥಿರ ಆಯ್ಕೆಗಳು ಹಾಗೂ ಡೈಪರ್ ಬಳಕೆಯ ಕುರಿತು ಅರಿವು ಮೂಡಿಸಲಾಯಿತು.

ವಿದ್ಯಾರ್ಥಿನಿಯರು ಮುಕ್ತವಾಗಿ ಚರ್ಚಿಸಿ  ಋತುಚಕ್ರಕ್ಕೆ ಸಂಬಂಧಿಸಿದ ವಿವಿಧ ಆರೋಗ್ಯ ಸಮಸ್ಯೆಗಳು ಮತ್ತು ಅನುಮಾನಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆದುಕೊಂಡರು.

ಸಂಪನ್ಮೂಲ ವ್ಯಕ್ತಿಗಳಾಗಿ ಹಸಿರು ದಳ ಮೇಲ್ವಿಚಾರಕ ರಾದ  ಪ್ರಿಯ ಮತ್ತು  ರೇಖಾ  ಮಾಹಿತಿ ನೀಡಿದರು. ಭವ್ಯ ಸಹಕರಿಸಿದರು.
ಪ್ರಾಂಶುಪಾಲರಾದ  ನಿರಂಜನ್, ಆಶೀರ್ವಾದ ಸಂಜೀವಿನಿ  ಒಕ್ಕೂಟದ ಅಧ್ಯಕ್ಷೆ  ವಿದ್ಯಾ, ಎಮ್ ಬಿ ಕೆ  ಭವಾನಿ, ಎಲ್ ಸಿ ಆರ್ ಪಿ  ಅರುಣಾಕ್ಷಿ, ಹಸಿರು ದಳ ಮೇಲ್ವಿಚಾರಕರಾದ  ಸಾಂತಪ್ಪ ಉಪಸ್ಥಿತರಿದ್ದರು.
ಪಲ್ಲವಿ, ಕಾರ್ಯಕ್ರಮ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *