ಬಂಟ್ವಾಳ:  ಫರಂಗಿಪೇಟೆ  ಶ್ರೀರಾಮ ವಿದ್ಯಾ ಸಂಸ್ಥೆ ಯಲ್ಲಿ ೨೦೨೬ -೨೦೨೭ ಸಾಲಿನ ಯಕ್ಷ ಶಿಕ್ಷಣ ತರಗತಿಗೆ ಚಾಲನೆ ನೀಡಲಾಯಿತು.ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಎ.ಕೆ. ಜಯರಾಮ ಶೇಕ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಾಲಾ ಸಂಚಾಲಕರಾದ ಎ.ಗೋವಿಂದ ಶೆಣೈ , ಯಕ್ಷ ದ್ರುವ ಪಟ್ಲ ಫೌಂಡೇಷನ್ ನ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ದಿವಾಕರ ಶೆಟ್ಟಿ ಪರಾರಿ ಗುತ್ತು , ಯಕ್ಷಗಾನ ಗುರುಗಳಾದ ರಕ್ಷಿತ್ ಶೆಟ್ಟಿ ಪಡ್ರೆ , ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕೊಟ್ಟಿಂಜ ಉಪಸ್ಥಿತರಿದ್ದರು

ಕಳೆದನಾಲ್ಕು ವರ್ಷಗಳಿಂದ ನಿರಂತರ ವಾಗಿ ಯಕ್ಷ ಶಿಕ್ಷಣವನ್ನು ಶ್ರೀರಾಮ ವಿದ್ಯಾ ಸಂಸ್ಥೆ ಯಲ್ಲಿ  ವಿದ್ಯಾರ್ಥಿಗಳಿಗೆ  ಯಕ್ಷ ಧ್ರುವ ಪಟ್ಲ ಫೌಂಡೇಶನ್ ನ ವತಿಯಿಂದ ನಡೆಸಿಕೊಂಡು ಬರಲಾಗುತ್ತಿದ್ದು, ಒಂದು ಬಾರಿ ಯಕ್ಷ ಗಾನ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತದೆ
 
   ಶಾಲಾ ಮುಖ್ಯಸ್ಥರಾದ  ದೇವದಾಸ ಕೆ  ಆರ್  ಕೊಡ್ಮಾಣ್  ಸ್ವಾಗತಿಸಿದರು ,ಶಾಲಾ  ಶಿಕ್ಷಕರಾದ ರಕ್ಷಿತ್ ರವರು ನಿರೂಪಿಸಿ ವಂದಿಸಿದರು 

By Suddi9

Leave a Reply

Your email address will not be published. Required fields are marked *