ಪುತ್ತೂರು: ನಗರದ ಹೊರವಲಯದ ಮುರದಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ. ಮನೆಯೊಂದರ ಬಳಿ ಈ ಶಿಶುವನ್ನು ಇಡಲಾಗಿತ್ತು. ಇದನ್ನು ಕಂಡ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಮತ್ತು ಆರೋಗ್ಯ ಇಲಾಖೆಯವರು ನವಜಾತ ಶಿಶುವನ್ನು ಮಂಗಳೂರು ಲೇಡಿಗೋಷನ್ ಆಸ್ಪತ್ರೆಯ ಮಕ್ಕಳ ನಿಗಾ ವಿಭಾಗಕ್ಕೆ ದಾಖಲಿಸಿದ್ದಾರೆ.

