ಕೈಕಂಬ: ರೋಸಾ ಮಿಸ್ತಿಕಾ ಪ್ರೌಢಶಾಲೆ, ಕಿನ್ನಿಕಂಬಳದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ  ಸಂಸ್ಥೆಯ ಪ್ರಮುಖರಾದ  ಉಮೇಶ್ ಮತ್ತು  ವಿಶಾಲಾಕ್ಷಿಯವರು ಒಟ್ಟು 250 ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಯೋಗ ಮತ್ತು ಪ್ರಾಣಾಯಾಮವನ್ನು ನಡೆಸಿಕೊಟ್ಟರು.

  ಆರೋಗ್ಯಕರ ದೇಹ ಮತ್ತು ಶಾಂತಿಯುತ ಮನಸ್ಸಿಗಾಗಿ ಯೋಗವನ್ನು ಜೀವನದ ಭಾಗವಾಗಿಸೋಣ ಎಂದು ಶಾಲಾ ಸಂಚಾಲಕಿ ಭಗಿನಿ ರೋಜ್ ಲಿಟಾ ರವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಭಗಿನಿ ಲೂಸಿ ಮರಿಸ್ಸಾ,  ಭಗಿನಿ ಅನಿತಾ ಲಿಡಿಯಾ ಮತ್ತು ಶಿಕ್ಷಕರಾದ ಅವಿಲ್ ಡಿ’ಸಿಲ್ವ , ಪ್ರವೀಣ್ ಕುಟಿನ್ನ  ಉಪಸ್ಥಿತರಿದ್ದರು.
ಕಾರ್ಯಕ್ರಮದ ಉಸ್ತುವರಿ ಯನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಲ್ಯಾನ್ಸಿ ಸಿಕ್ವೇರಾರ ವಹಿಸಿದ್ದರು

By Suddi9

Leave a Reply

Your email address will not be published. Required fields are marked *