ಬಂಟ್ವಾಳ :  ಶಿಕ್ಷಣದ ಮೂಲಕ‌ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು.ದೃಢ ಚಿತ್ತದಿಂದ ವಿದ್ಯಾಭ್ಯಾಸ ಮಾಡಿ ಜೊತೆಗೆ ಉತ್ತಮ ಗುಣನಡತೆಗಳನ್ನು ಬೆಳೆಸಿಕೊಳ್ಳಬೇಕು‌ ಎಂದು ಎಸ್.ವಿ.ಎಸ್.ದೇವಳ ಪದವಿ ಪೂರ್ವ ಕಾಲೇಜಿನ ಸಂಚಾಲಕ ಸ್ವರಣೋದ್ಯಮಿ ಬಿ.ಸುರೇಶ ವಿ.ಬಾಳಿಗ ಹೇಳಿದರು.
ಅವರು   ಕಾಲೇಜಿನ ನೂತನ ವಿದ್ಯಾರ್ಥಿಗಳ  ಸ್ವಾಗತ ಹಾಗೂ ವಿದ್ಯಾರ್ಥಿ ಸಂಘವನ್ನು ದೀಪಬೆಳಗಿ  ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ  ಕೆ.ಎನ್.ಗಂಗಾಧರ ಆಳ್ವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಪಿಯುಸಿ ಹಂತದ ಕಲಿಕೆ ಮುಂದಿನ ವಿದ್ಯಾಭ್ಯಾಸ ಹಾಗೂ ಜೀವನಕ್ಕೆ ಅಡಿಪಾಯವಾಗಿದ್ದು ಕಲಿಕೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವುದಕ್ಕೆ ಅವಕಾಶವಿದ್ದು ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಶಿಕ್ಷಣ ವಿಫಲವಾದರೆ ಎಲ್ಲಾ ವ್ಯವಸ್ಥೆಗಳೂ ಕೆಡುತ್ತವೆ .ಶಿಕ್ಷಣಕ್ಕೆ ಆಡಳಿತ ಮಂಡಳಿಯು ವಿಶೇಷ ಪ್ರಾಮುಖ್ಯತೆ ನೀಡುತ್ತಿದೆ ಎಂದರು.
ವಿದ್ಯಾರ್ಥಿ ನಾಯಕರಿಗೆ ಉಪನ್ಯಾಸಕ ವೆಂಕಟೇಶ ನಾಯಕ್ ಪ್ರತಿಜ್ಞಾ ವಿಧಿ ಬೋಧಿಸಿದರು. ಆಡಳಿತ ಮಂಡಳಿ ಸದಸ್ಯರಾದ ವೆಂಕಟರಮಣ ಶೆಣೈ,ಭಾಮಿ ಲಕ್ಷ್ಮಣ ಶೆಣೈ, ಬಿ.ಸುಬ್ರಾಯ ನಾಯಕ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ವಿದ್ಯಾರ್ಥಿ ನಾಯಕಿ ವಿಭಾ ಸ್ವಾಗತಿಸಿ,  ವಿಜ್ಞಾ ನಿರೂಪಿಸಿದರು.ವಿದ್ಯಾರ್ಥಿ ಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಮೋಕ್ಷಿತಾ,ಕ್ರೀಡಾಕಾರ್ಯದರ್ಶಿಗಳಾಗಿ ಅಹಮ್ಮದ್ ಶಾಹಿಲ್,ಗೀತ್ ಪ್ರಕಾಶ್, ಶಿಕ್ಷಣಕಾರ್ಯದರ್ಶಿ  ತನುಶ್ರೀ,ಸಾಂಸ್ಕೃತಿಕಗಳಾಗಿ ಕಾರ್ಯದರ್ಶಿ ಚರಿಷ್ಮಾ,ಸೃಜನ್,ಶಿಸ್ತು ಕಾರ್ಯದರ್ಶಿ ಖುಷ್ಬೂ,ಪರಿಸರ ಕಾರ್ಯದರ್ಶಿಯಾಗಿ ದೀಪಿಕಾ ಜವಾಬ್ದಾರಿ ಸ್ವೀಕರಿಸಿದರು. 

By Suddi9

Leave a Reply

Your email address will not be published. Required fields are marked *